Thursday, 12th December 2024

BBK 11: ಒಬ್ಬ ಚಪ್ಪಲಿ ಎತ್ತಿ ಬಿಸಾಡ್ತಾರೆ..: ಮಂಜುವಿನ ಎದುರು ಸುದೀಪ್ ಉಗ್ರ ರೂಪ

Ugramm Manju and Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಕಳೆದ ವಾರವಂತು ಮನೆ ರಣರಂಗವೇ ಆಗಿತ್ತು. ಲಾಯರ್ ಜಗದೀಶ್ ವಿರುದ್ಧ ಇಡೀ ಮನೆಯ ಸದಸ್ಯರು ತಿರುಗಿ ಬಿದ್ದಿದ್ದರು. ದೊಡ್ಡ ಮಟ್ಟದ ಜಗಳವೇ ಆಗಿತ್ತು. ಇದರಲ್ಲಿ ಹೆಚ್ಚಿನ ಸದಸ್ಯರು ವಿಕೋಪಕ್ಕೆ ತಿರುಗಿದ್ದರು. ಅವಾಚ್ಯ ಶಬ್ದಗಳನ್ನು ಬಳಸಿದ ಜಗದೀಶ್​ ಮತ್ತು ಅವರನ್ನು ತಳ್ಳಿದ ರಂಜಿತ್ ಮನೆಯಿಂದ ಹೊರಹೋಗಬೇಕಾಯಿತು. ಇದೀಗ ಮನೆಯ ಮಂದಿಗೆ ಕಿಚ್ಚ ಈ ವಿಚಾರವಾಗಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮುಖ್ಯವಾಗಿ ಸುದೀಪ್ ಅವರು ಉಗ್ರಂ ಮಂಜು, ಮಾನಸಾ ತುಕಾಲಿ ಹಾಗೂ ಚೈತ್ರಾ ಕುಂದಾಪುರ ಅವರ ವಿರುದ್ಧ ಗರಂ ಆಗಿದ್ದಾರೆ. ಒಬ್ಬರು ಮತ್ತೊಬ್ಬ ಸ್ಪರ್ಧಿ ಮುಂದೆ ಚಪ್ಪಲ್ ಎತ್ತಿ ಬಿಸಾಡುತ್ತಾರೆ ಎಂದರೆ ಅದು ಸರೀನಾ? ಎಂದು ಪ್ರಶ್ನೆ ಮಾಡಿದ್ದಾರೆ. ಚೈತ್ರಾ ಹಾಗೂ ಮಾನಸಾ ಅವರಿಗೂ ಮೈಚಳಿ ಬಿಡಿಸಿದ್ದಾರೆ.

ಈ ವಾರದ ಎಪಿಸೋಡ್​ನಲ್ಲಿ ಗಲಾಟೆ ನಡೆಯುತ್ತಿದ್ದ ಸಂದರ್ಭ ಜಗದೀಶ್‌ ಮನೆಮಂದಿಗೆ ಬಾಯಿಗೆ ಬಂದ ಹಾಗೆ ಬೈದಿದ್ದರು. ಮನೆಯಲ್ಲಿದ್ದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ವೇಳೆ ಉಗ್ರಂ ಮಂಜು ಅವರು ಲಾಯರ್​ ಜಗದೀಶ್​ ಅವರ ಮುಂದೆ ಚಪ್ಪಲಿಯನ್ನು ಎಸೆದು ಅವಮಾನ ಮಾಡಿದ್ದರು. ಈ ವಿಚಾರವಾಗಿ ಮಾತನಾಡಿದ ಸುದೀಪ್ ಇಲ್ಲಿ ಇರೋರು ಎಷ್ಟು ಜನ ಸರಿ ಇದ್ದೀರಿ? ಎಂದು ಸ್ಪರ್ಧಿಗಳಿಗೆ ಕೇಳಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಆಡಿದ ಮಾತಿಗೂ ಸುದೀಪ್ ಅವರು ರೋಷಾವೇಶದಲ್ಲಿ ಮಾತನಾಡಿದ್ದಾರೆ. ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ. ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅಂದ್ರೆ ಯಾವ ನನ್ಮಗನು ಅಪ್ಪನಿಗೆ ಬೈಯುತ್ತಿಲ್ಲ ಮೇಡಂ ತಾಯಿಗೆ ಬೈಯುತ್ತಾ ಇರೋದು ಎಂದು ಸುದೀಪ್ ಹೇಳಿದ್ದಾರೆ.

ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್ ಅವರು ಬಿಗ್‌ ಬಾಸ್‌ಗೆನೇ ಕ್ಲಾಸ್‌ ತೆಗೆದುಕೊಂಡಿರುವಂತೆ ಕಾಣುತ್ತಿದೆ. ಇಷ್ಟೂ ವರ್ಷ ಮನೆಯವರು ಮಾಡೋ ತಪ್ಪನ್ನ ಚರ್ಚೆ ಮಾಡುತ್ತಿದ್ದ ಈ ವೇದಿಕೆಯಲ್ಲಿ ಈ ಸಲ ಕಂಪ್ಲೆಂಟ್‌ ಇರೋದು ಬಿಗ್‌ ಬಾಸ್‌ ಮೇಲೆ. ಬಿಗ್‌ ಬಾಸ್‌ ಅವಸರದ ನಿರ್ಧಾರ ತೆಗೆದುಕೊಂಡ್ರಾ? ಅಥವಾ ತೆಗೆದುಕೊಂಡ ನಿರ್ಧಾರ ತಪ್ಪಾಗಿದ್ಯಾ? ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

BBK 11: ಕಿಚ್ಚನ ಪಂಚಾಯಿತಿಯಲ್ಲಿ ಧಗ ಧಗ..: ಸ್ಪರ್ಧಿಗಳ ಮೈಚಳಿ ಬಿಡಿಸಿದ ಸುದೀಪ್