Friday, 15th November 2024

BBK 11: ಟಿಆರ್​ಪಿಯಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದ ಬಿಗ್ ಬಾಸ್: ವಾರದ ಕತೆಗೆ ಅಮೋಘ ರೆಸ್ಪಾನ್ಸ್

BBK 11 TRP

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವುತ್ತಿದೆ ಎಂಬ ಮಾತಿತ್ತು. ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ ಎನ್ನಲಾಗುತ್ತಿತ್ತು. ಲಾಯರ್ ಜಗದೀಶ್ ಹೊರಬಂದ ಬಳಿಕ ಬಿಬಿಕೆ 11 ನೋಡಲ್ಲ ಎಂದು ಅನೇಕ ಪೋಸ್ಟ್​ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದವು. ಆದರೆ, ಸಿಂಗರ್ ಹನುಮಂತ ಬಂದ ಮೇಲೆ ಮನೆಯ ಕಳೆ ಬದಲಾಗಿದೆ. ಜನರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಇದೀಗ 44ನೇ ವಾರದ ಟಿಆರ್​ಪಿ ಹೊರಬಿದ್ದಿದೆ.

43ನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ತಾಯಿಯ ನಿಧನದ ಕಾರಣದಿಂದ ವೀಕೆಂಡ್ ಶೋ ನಡೆಸಿಕೊಡಲು ಬಂದಿರಲಿಲ್ಲ. ಇವರ ಬದಲಾಗಿ ಶನಿವಾರ ಯೋಗರಾಜ್ ಭಟ್ ಬಂದಿದ್ದರೆ, ಭಾನುವಾರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಜರಿದ್ದರು. ಆ ವಾರ ಬಿಗ್ ಬಾಸ್​ಗೆ ಸಾಧಾರಣ ಟಿವಿಆರ್ ಸಿಕ್ಕಿತ್ತಷ್ಟೆ. ನಗರ ಭಾಗದಲ್ಲಿ ಈ ಶೋಗೆ 7.3 ಹಾಗೂ ಗ್ರಾಮೀಣ ಮತ್ತು ನಗರ ಭಾಗ ಸೇರಿ 7 ಟಿವಿಆರ್ ಸಿಕ್ಕಿತ್ತು. ಆದರೆ, ಸುದೀಪ್ ಕಮ್​ಬ್ಯಾಕ್ ಮಾಡಿದ 44ನೇ ವಾರ ಭರ್ಜರಿ ಟಿಆರ್​ಪಿ ಪಡೆದುಕೊಂಡಿದೆ.

ಬಿಗ್ ಬಾಸ್​ಗೆ ವಾರದ ದಿನಗಳಲ್ಲಿ (ನಗರ ಭಾಗದಲ್ಲಿ) 7.5 ಟಿಆರ್​ಪಿ, ಶನಿವಾರ 8.1 ಹಾಗೂ ಭಾನುವಾರ 9.3 ಟಿಆರ್​ಪಿ ಪಡೆದುಕೊಂಡಿದೆ. ಸುದೀಪ್ ಅವರು ಇಲ್ಲದ ಸಂದರ್ಭದಲ್ಲಿ ವೀಕೆಂಡ್ ಟಿಆರ್​ಪಿ ಏಳಕ್ಕೆ ಕುಸಿದು ಹೋಗಿತ್ತು. ಸುದೀಪ್ ಬರುತ್ತಿದ್ದಂತೆ ಟಿಆರ್​ಪಿಯಲ್ಲಿ ಏರಿಕೆ ಆಗಿದೆ. ಹೀಗಾಗಿ ಸುದೀಪ್ ಇದ್ದರೆ ಮಾತ್ರ ಬಿಗ್ ಬಾಸ್​ಗೆ ಒಂದು ಕಳೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ 10+ಟಿವಿಆರ್​ ಸಿಕ್ಕಿದೆ. ಲಕ್ಷ್ಮೀ ನಿವಾಸ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಅಮೃತಧಾರೆ ಸೀರಿಯಲ್ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಐದನೇ ಸ್ಥಾನದಲ್ಲಿದೆ.

BBK 11: ಬಿಗ್ ಬಾಸ್​ಗೆ ಚಾರು ಬಂದ ಕೂಡಲೇ ಪ್ರಪೋಸ್ ಮಾಡಿದ ಹನುಮಂತ: ಎಲ್ಲರೂ ಶಾಕ್