ಇತ್ತೀಚೆಗಷ್ಟೆ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅವರು ಕಳೆದ ವೀಕೆಂಡ್ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆ ಮಾಡಲು ಬಂದಿರಲಿಲ್ಲ. ಇವರ ಬದಲು ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಬಂದಿದ್ದರು. ಸುದೀಪ್ ಅವರು ಅ. 19 ರಂದು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು.
ಈ ವಾರ ಸುದೀಪ್ ಶೋ ನಡೆಸಿ ಕೊಡಲು ಬರುತ್ತಾರ ಅಥವಾ ಇಲ್ಲವೇ ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೀಗ ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್ಬಾಸ್ ವೇದಿಕೆಗೆ ಮರಳಿದ್ದಾರೆ. ಬಿಗ್ಬಾಸ್ ಕಡೆಯಿಂದ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಗಿದೆ.
ಬಿಗ್ ಬಾಸ್ ವೇದಿಕೆಯಲ್ಲೇ ತಾಯಿಯನ್ನು ನೆನೆದು ಸುದೀಪ್ ಕಣ್ಣೀರಿಟ್ಟಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ತಾಣದಲ್ಲಿ ಬಿಡುಗಡೆಯಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ತಾಯಿಗೆ ಎಲ್ಲರೂ ನಮನ ಸಲ್ಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಹಾಗೇ ವಾಸುಕಿ ವೈಭವ್ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸುದೀಪ್ ಅವರಿಗೆ ಸಾಂತ್ವನ ನೀಡಿದ್ದಾರೆ.
ಕಿಚ್ಚ ಅವರ ಮುಂದೆ ಅವರ ತಾಯಿ ಫೋಟೋವನ್ನು ಹಾಕಿ, ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ.. ಎಂಬ ಮಾತನ್ನು ಬಿಗ್ ಬಾಸ್ ಆಡಿದ್ದಾರೆ. ತಾಯಿಯ ಭಾವಚಿತ್ರವನ್ನು ನೋಡುತ್ತಾ ಕಿಚ್ಚ ನಿಂತಲ್ಲೇ ನಿಂತು ಮಾತು ಬಾರದೆ, ನೋವನ್ನು ನುಂಗಿ ಕಣ್ಣೀರಿಟ್ಟಿದ್ದಾರೆ.
ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಹಾಜರಾದ ಕಿಚ್ಚ!
— Colors Kannada (@ColorsKannada) November 2, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/LBW7BaeZcF
ಇನ್ನು ವಾರದ ಕತೆಯಲ್ಲಿ ಸುದೀಪ್ ಕಳೆದ ಎರಡು ವಾರದ ವಿಚಾರ ತೆಗೆದುಕೊಳ್ಳುತ್ತಾರ ಅಥವಾ ಈ ವಾರದ ಬಗ್ಗೆ ಮಾತ್ರ ಮಾತನಾಡುತ್ತಾ ಎಂಬುದು ನೋಡಬೇಕಿದೆ. ಮುಖ್ಯವಾಗಿ ಕಳೆದ ವಾರ ಬಹಳಷ್ಟು ಗಲಾಟೆಗೆ ಕಾರಣವಾದ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ವಿಚಾರದ ಬಗ್ಗೆ ಸುದೀಪ್ ಏನು ಹೇಳುತ್ತಾರೆ ನೋಡಬೇಕಿದೆ.
ಹಾಗೆಯೆ ತ್ರಿವಿಕ್ರಮ್ ಅವರಿಗೆ ಈ ಶೋಗೆ ಬರುವ ಮುನ್ನವೇ ಬಿಗ್ ಬಾಸ್ ಮನೆಯೊಳಗೆ ಬರುವ ಸ್ಪರ್ಧಿಗಳ ಲಿಸ್ಟ್ ಸಿಕ್ಕಿತ್ತಂತೆ. ಅವರು ಎಲ್ಲ ಇನ್ಸ್ಟಾಗ್ರಾಮ್ ಅಕೌಂಟ್ ನೋಡಿ, ಅವರಿಗೆ ಎಷ್ಟೆಲ್ಲ ಫಾಲೋವರ್ಸ್ ಇದ್ದಾರೆಂದು ತಿಳಿದು ಒಳಗೆ ಬಂದಿದ್ದಾರಂತೆ ಎಂದು ಮೋಕ್ಷಿತಾ ಪೈ ಹೇಳಿದ್ದರು. ಇದರ ಬಗ್ಗೆಯೂ ಇಂದು ಟಾಕ್ ನಡೆಯಲಿದೆ.
BBK 11: ಧ್ಯಾನ ಮಾಡುವಾಗಲೂ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ಕಾರಣವೇನು?