ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಐದು ವಾರಗಳಾಗಿವೆ. ಆದರೂ ಮನೆಮಂದಿ ಇನ್ನೂ ಸೆಟಲ್ ಆದಂತೆ ಕಾಣುತ್ತಿಲ್ಲ. ಪ್ರತಿ ದಿನ ಒಂದಲ್ಲ ಒಂದು ಸಣ್ಣ ವಿಚಾರಕ್ಕೂ ಜಗಳಗಳು ನಡೆಯುತ್ತಿದೆ. ಹಿಂದಿನ ವೀಕೆಂಡ್ ಕಿಚ್ಚ ಸುದೀಪ್ ಬಂದಿರದ ಕಾರಣ ಕೆಲವು ಪ್ರಶ್ನೆಗಳು ಇನ್ನೂ ಹಾಗೆಯೆ ಉಳಿದಿದೆ. ಕಳೆದ ವೀಕೆಂಡ್ ವಾರದ ಕತೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮದ ಬದಲಿಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಬಂದಿದ್ದರು.
ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅವರು ಕಳೆದ ವೀಕೆಂಡ್ನಲ್ಲಿ ನಿರೂಪಣೆ ಮಾಡಲಿಲ್ಲ. ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು. ಇದೀಗ ಈ ವಾರ ಸುದೀಪ್ ಬರುತ್ತಾರ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಪರೋಕ್ಷವಾಗಿ ಬಿಗ್ ಬಾಸ್ ಉತ್ತರ ನೀಡಿದ್ದಾರೆ.
ಸದ್ಯ ಎಲ್ಲ ಕಡೆಗಳಲ್ಲಿ ದೀಪಾವಳಿ ರಂಗು ಜೋರಾಗಿದ್ದು, ಶನಿವಾರವೂ ಹಬ್ಬದ ಆಚರಣೆ ಇರುತ್ತದೆ. ಹೀಗಾಗಿ ಮನೆಯವರಿಗೆ ಗ್ರ್ಯಾಂಡ್ ಆಗಿ ರೆಡಿ ಆಗಲು ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಒಂದನ್ನು ಬಿಗ್ ಬಾಸ್ ನೀಡಿದ್ದರು. ಚಟುವಟಿಕೆ ಪ್ರಕಾರ, ಸ್ಪರ್ಧಿಗಳಿಗೆ ಖಾಸಗಿ ಬಟ್ಟೆ ಕಂಪನಿಯೊಂದರ ಕ್ಯಾಟ್ಲಾಗ್ನ ಕಳುಹಿಸಿಕೊಡಲಾಗಿದೆ. ಇದರಲ್ಲಿ ಅವರಿಷ್ಟದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಹೀಗೆ ಆಯ್ಕೆ ಮಾಡಿದ ಬಟ್ಟೆಯನ್ನು ವಾರಾಂತ್ಯದ ಎಪಿಸೋಡ್ಗೆ ಉಡಲು ಮನೆಯ ಎಲ್ಲ ಸದಸ್ಯರಿಗೆ ಕಳುಹಿಸಿಕೊಡುವುದಾಗಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇಷ್ಟು ಗ್ರ್ಯಾಂಡ್ ಆಗಿ ವೀಕೆಂಡ್ ಎಪಿಸೋಡ್ ನಡೆಯಲಿದೆ ಎಂದರೆ ಸುದೀಪ್ ಬಂದೇ ಬರುತ್ತಾರೆ ಎಂದು ಹೇಳಲಾಗಿದೆ. ಸುದೀಪ್ ಬಂದರೆ ಪಂಚಾಯಿತಿಯಲ್ಲಿ ಕಳೆದ ಎರಡೂ ವಾರಗಳ ವಿಚಾರ ಎತ್ತುತ್ತಾರೊ ಅಥವಾ ಈ ವಾರದ ಬಗ್ಗೆ ಮಾತ್ರ ಮಾತನಾಡುತ್ತಾರ ಎಂಬುದು ನೋಡಬೇಕಿದೆ.
BBK 11: ಫ್ಯಾಮಿಲಿಯೇ ಇಲ್ಲದ ಐಶ್ವರ್ಯಾಗೂ ಬಂತು ಪತ್ರ: ಕಳುಹಿಸಿದ್ದು ಯಾರು ಗೊತ್ತೇ?