ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವುತ್ತಿದೆ. ಈ ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ. ಲಾಯರ್ ಜಗದೀಶ್ ಹೊರಬಂದ ಬಳಿಕ ಬಿಬಿಕೆ 11 ನೋಡಲ್ಲ ಎಂದು ಅನೇಕ ಪೋಸ್ಟ್ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದವು. ಆದರೆ, ಸಿಂಗರ್ ಹನುಮಂತ ಬಂದ ಮೇಲೆ ಮನೆಯ ಕಳೆ ಬದಲಾಯಿತು ಎನ್ನಲಾಗಿತ್ತು. ಆದರೀಗ ಬಿಗ್ ಬಾಸ್ ಟಿಆರ್ಪಿಯಲ್ಲಿ ಮತ್ತೆ ಕುಸಿತ ಕಂಡಿದೆ.
ತಾಯಿಯ ನಿಧನದ ಬಳಿಕ ಸುದೀಪ್ ಕಮ್ಬ್ಯಾಕ್ ಮಾಡಿದ 44ನೇ ವಾರ ಬಿಗ್ ಬಾಸ್ಗೆ ದಾಖಲೆಯ ಟಿಆರ್ಪಿ ದಕ್ಕಿತ್ತು. ವಾರದ ದಿನಗಳಲ್ಲಿ (ನಗರ ಭಾಗದಲ್ಲಿ) 7.5 ಟಿಆರ್ಪಿ, ಶನಿವಾರ 8.1 ಹಾಗೂ ಭಾನುವಾರ 9.3 ಟಿಆರ್ಪಿ ಪಡೆದುಕೊಂಡಿತ್ತು. ಆದರೀಗ 45ನೇ ವಾರದ ಟಿಆರ್ಪಿ ಡೌನ್ ಆಗಿದೆ. 45ನೇ ವಾರದ ದಿನಗಳಲ್ಲಿ ಈ ಶೋಗೆ 6.6 ಟಿಆರ್ಪಿ ಸಿಕ್ಕರೆ, ಶನಿವಾರ 8.0 ಮತ್ತು ಭಾನುವಾರ 8.5 ಟಿವಿಆರ್ ಪಡೆದುಕೊಂಡಿದೆ. ಈ ಮೂಲಕ ಕಿಚ್ಚನ ಪಂಚಾಯ್ತಿಗೆ ಕೊಂಚ ಡಿಮಾಂಡ್ ಕಡಿಮೆ ಆದಂತಿದೆ.
ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಬಿಗ್ ಶಾಕ್ ಆಗಿದೆ. ಮೊದಲ ಸ್ಥಾನದಲ್ಲಿದ್ದ ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಸಮಯ ಬದಲಾವಣೆಯ ನಂತರ ಟಿಆರ್ಪಿ ಕುಸಿಯುತ್ತಾ ಬರುತ್ತದೆ. 43ನೇ ವಾರದಲ್ಲಿ 10+ಟಿವಿಆರ್ ಸಿಕ್ಕಿದ್ದ ಇದಕ್ಕೆ ಈಗ 8.1 ಟಿವಿಆರ್ ಸಿಕ್ಕಿದೆಯಷ್ಟೆ.
ಎರಡನೇ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಮೊದಲ ಸ್ಥಾನಕ್ಕೇರಿದೆ. ಇದು 8.8 ಟಿಆರ್ಪಿ ಪಡೆದುಕೊಂಡಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುವ ಅಮೃತಧಾರೆ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್ ಈ ವಾರ 8.1 ಟಿಆರ್ಪಿ ಪಡೆದುಕೊಳ್ಳುವ ಮೂಲಕ ಟಾಪ್ 10ರಲ್ಲಿ ಮೂರನೇ ಸ್ಥಾನದಲ್ಲಿದೆ.
ಅಣ್ಣಯ್ಯ ಧಾರಾವಾಹಿ 7.8 ಟಿಆರ್ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. ಶ್ರಾವಣಿ ಐದನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್ ಸಹ ಒಳ್ಳೆಯ ನಂಬರ್ ಪಡೆದುಕೊಂಡಿದೆ. ಆರನೇ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮೀ ಸೀರಿಯಲ್ ಏಳನೇ ಸ್ಥಾನ, ಲಕ್ಷ್ಮೀ ಬಾರಮ್ಮ ಸೀರಿಯಲ್ ಎಂಟನೇ ಸ್ಥಾನ ಹಾಗೂ ಸೀತಾ ರಾಮ ಸೀರಿಯಲ್ 10ನೇ ಸ್ಥಾನದಲ್ಲಿದೆ.