Wednesday, 23rd October 2024

ಪುನೀತ್ ನಿಧನ: ಕಣ್ಣೀರಿಟ್ಟ ಧಾರವಾಡದ ಪುಟಾಣಿ

ಹುಬ್ಬಳ್ಳಿ: ಅಕಾಲಿಕವಾಗಿ ಇಹಲೋಕ ತೊರೆದು ಹೋದ ಪವರ್ ಸ್ಟಾರ್ ಪುನೀತ್ ಅವರನ್ನು ನೆನೆದು ಧಾರವಾಡದ ಪುಟಾಣಿ ಅಭಿಮಾನಿ ಕಣ್ಣೀರಿಟ್ಟಳು.

ಬಾಲಕಿಯ ಚಾಕಚಕ್ಯತೆ ಕಂಡು ಎರಡು ತಿಂಗಳ ಹಿಂದಷ್ಟೇ ಆಕೆಯನ್ನು ಮನೆಗೆ ಕರೆದು ಅಪ್ಪು ಸನ್ಮಾನ ಮಾಡಿದ್ದರು ಎಂದು ತಿಳಿದುಬಂದಿದೆ. ಡಾ.ರಾಜ್​ ಚಿತ್ರಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುವ ಬಾಲಕಿ, ಧಾರವಾಡ ಜಿಲ್ಲೆಯ ಕುಂದಗೋಳದ ನಿವಾಸಿ ಶ್ರೀಶಾ. ಅವಳ ರಾಜಕುಮಾರ್ ಬಗೆಗಿನ ಅಭಿಮಾನ ಕಂಡು ಪುನೀತ್​ ಅವಳನ್ನು ಸತ್ಕರಿಸಿದ್ದರು.

ಈಗ ಪುನೀತ್ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿರುವ ಶ್ರೀಶಾ, ಕಣ್ಣೀರಿಡುತ್ತಲೇ ಪುನೀತ್ ಅಭಿನಯದ ಎಲ್ಲಾ ಚಿತ್ರಗಳ ಹೆಸರು ಗಳನ್ನು ಹೇಳಿ ವಿಡಿಯೋ ಮಾಡಿ ಸಂತಾಪ ಸೂಚಿಸಿದ್ದಾಳೆ.