ತ್ರಿಶೂರ್ನ ಕೈಪಮಂಗಲಂ ಪಣಾಂಬಿಕುನ್ನಲ್ಲಿ ಈ ಘಟನೆ ಸಂಭವಿಸಿದೆ. ಕೊಲ್ಲ ಸುಧಿ ಮತ್ತು ತಂಡ ಕೋಯಿ ಕ್ಕೋಡ್ನ ವಡಕಾರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಪಿಕಪ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸುಧಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದುರ ದೃಷ್ಟವಶಾತ್ ಬದುಕಿಸಲು ಸಾಧ್ಯ ವಾಗಲಿಲ್ಲ. ಇನ್ನೂ ಸುಧಿ ಜೊತೆ ನಟ ಬಿನು ಅಡಿಮಲಿ, ಉಲ್ಲಾಸ್ ಆರೂರ್ ಮತ್ತು ಮಹೇಶ್ ಕೂಡ ಜೊತೆಗಿದ್ದರು. ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಧಿ ಕಾರಿನ ಮುಂಭಾಗದ ಸೀಟ್ನಲ್ಲಿ ಕುಳಿತಿದ್ದರು. ಉಲ್ಲಾಸ್ ಆರೂರ್ ಕಾರು ಡ್ರೈವ್ ಮಾಡುತ್ತಿದ್ದರು. ಚಾಲಕ ನಿದ್ರೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಸುಧಿಗೆ ತಲೆಗೆ ಪೆಟ್ಟಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲ್ಲಂ ಸುಧಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಒಬ್ಬ ಅದ್ಭುತ ಕಲಾವಿದನ ನಿಧನಕ್ಕೆ ಇಡೀ ಮಲಯಾಳಂ ಚಿತ್ರರಂಗವೇ ಕಣ್ಣೀರಿಟ್ಟಿದೆ.