Sunday, 15th December 2024

Kona Teaser: ಚಿತ್ರ ನಿರ್ಮಾಣಕ್ಕೆ ಮುಂದಾದ ತನಿಷಾ ಕುಪ್ಪಂಡ; ಕೋಮಲ್‌ ಅಭಿನಯದ ‘ಕೋಣ’ ಸಿನಿಮಾದ ಟೀಸರ್‌ ಔಟ್‌

Kona Teaser

ಬೆಂಗಳೂರು: ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಕುಪ್ಪಂಡ ಪ್ರೊಡಕ್ಷನ್ ನಿರ್ಮಾಣದ ಮೊದಲ ಸಿನಿಮಾ ‘ಕೋಣ’ದ ಟೀಸರ್ ಬಿಡುಗಡೆಯಾಗಿದೆ (Kona Teaser). ಕೋಮಲ್‌ (Komal) ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್‌ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್‌ನಲ್ಲಿ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕೋಮಲ್, ʼʼಕೋಣʼ ಡಾರ್ಕ್ ಹ್ಯೂಮರ್. ಇದರಲ್ಲಿ ಆ ರೀತಿಯ ಸಬ್ಜೆಕ್ಟ್‌ ತುಂಬಾ ಇದೆ. ಚಾರ್ಲಿ ಚಾಂಪಿಯನ್ ಕಷ್ಟದಲ್ಲಿ ಸಿಗುವ ಪಾತ್ರ ಹೇಗೆ ಜನಕ್ಕೆ ಎಂಜಾಯಗಗಮೆಂಟ್ ಸಿಗುತ್ತದೆಯೋ ಹಾಗೇ. ಹರಿ ಹೇಳಿದ್ದು, ಮೂಢನಂಬಿಕೆ, ನನ್ನ ಹೊಸದಾಗಿ ತೋರಿಸಿದ ರೀತಿ, ಶಾಸ್ತ್ರ ಹೇಳುವ ರೀತಿ. ರೋಬೋ ಬಗ್ಗೆ ಹೇಳಿದ ರೀತಿ ಸಂತೋಷವಾಯ್ತು. ʼಕೋಣʼ ಸಿನಿಮಾ ನೋಡಿದಾಗ ಮಲಯಾಳಂ ಸಿನಿಮಾ ನೋಡಿದ ರೀತಿ ಆಯ್ತು. ನಿಮ್ಮ ಬೆಂಬಲ ಕೋಣ ಸಿನಿಮಾ ಮೇಲೆ ಇರಲಿʼʼ ಎಂದು ಹೇಳಿದರು.

ನಿರ್ದೇಶಕ ಹರಿಕೃಷ್ಣ ಎಸ್. ಮಾತನಾಡಿ, ʼʼನಮ್ಮ ಪ್ರೊಡಕ್ಷನ್ ಹೌಸ್ ಲಾಂಚಿಂಗ್ ಗ್ರೀಟಿಂಗ್ ಆಗಿ ʼಕೋಣʼ ಟೀಸರ್ ಬಿಡುಗಡೆ ಮಾಡಲಾಗಿದೆ. ಕೋಮಲ್‌ಗೆ ಕಥೆ ಹೇಳಿದಾಗ ಅವರು ಇಷ್ಟಪಟ್ಟರು. ಟೀಸರ್ ಗ್ರೀಟಿಂಗ್ ರೀತಿ. ನಮ್ಮ ಪ್ರೊಡಕ್ಷನ್‌ನಲ್ಲಿ ಈ ಕ್ವಾಲಿಟಿ ಸಿನಿಮಾ ಬರುತ್ತದೆ ಎಂದು ಪ್ರಮೋಷನ್ ಮಾಡುತ್ತಿದ್ದೇವೆ. ಅತಿ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇವೆ. ದೀಪಾವಳಿ ಬಳಿಕ ಮುಹೂರ್ತ ಮಾಡುತ್ತೇವೆ. ‌ಹಳ್ಳಿಯಲ್ಲಿ ಕೋಣದ ಜೊತೆ ನಡೆಯುವ ಕಥೆ ಇದುʼʼ ಎಂದು ತಿಳಿಸಿದರು.

ನಿರ್ಮಾಪಕಿ ಕಂ ನಟಿ ತನಿಷಾ ಕುಪ್ಪಂಡ ಮಾತನಾಡಿ, ʼʼಕೋಣʼ ಟೀಸರ್ ಸಕ್ಸಸ್ ಫುಲ್ ಆಗಿ ಲಾಂಚ್ ಆಗಿರುವುದಕ್ಕೆ ತಂಡವೇ ಕಾರಣ. ಕೆ ಅಂದರೆ ಕುಪ್ಪಂಡ, ಕೋಣ, ಕೋಮಲ್. ಈ ರೀತಿ ಲಿಂಕ್ ಇದೆ. ಕುಪ್ಪಂಡ ಪ್ರೊಡಕ್ಷನ್ ಅಂತ ಯೋಚನೆ ಮಾಡಿದಾಗ ಸಣ್ಣದಾಗಿ ಮಾಡೋಣ. ಆಲ್ಬಂ ಸಾಂಗ್ ಮಾಡೋಣ ಎನ್ನುವ ಯೋಚನೆ ಬಂತು. ನನಗೆ ಆಲ್ಬಂ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ಆ ಬಳಿಕ ಸಿನಿಮಾ. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ. ನನಗೆ ಖುಷಿ ಇದೆ. ಈ ರೀತಿ ಟೀಂ ನನ್ನ ಜೊತೆ ಇರುವುದಕ್ಕೆ. ಕೋಮಲ್ ಈ ಪ್ರಾಜೆಕ್ಟ್‌ನಲ್ಲಿ ಇರುವುದು ನಮಗೆ ಖುಷಿ ತಂದಿದೆʼʼ ಎಂದರು.

ʼಕೋಣʼ ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನ. ಈ ಬ್ಯಾನರ್‌ನಡಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನೈಜ ಘಟನೆ ಆಧರಿಸಿ ನಿರ್ದೇಶಕ ಎಸ್.ಹರಿಕೃಷ್ಣ ಒಂದು ರೋಚಕ ಕಥೆ ಹೆಣೆದಿದ್ದಾರೆ. ಈ ಕಥೆಯಲ್ಲಿ ಕೋಮಲ್ ಹೀರೋ ಅನ್ನೋದು ಒಂದು ಕಡೆಯಾದರೆ ಕೋಣ ಚಿತ್ರದ ಮತ್ತೊಬ್ಬ ಹೀರೋ ಎಂದು ಚಿತ್ತತಂಡ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Kiccha Sudeep: ಮತ್ತೆ ಒಂದಾದ ಸುದೀಪ್-ಅನೂಪ್; 185 ವರ್ಷ ಬಳಿಕದ ಕಥೆ ಹೇಳಲಿದೆ ʼವಿಕ್ರಾಂತ್ ರೋಣʼ ಜೋಡಿ

ʼಕೋಣʼ ಸಿನಿಮಾದಲ್ಲಿ ಕೋಮಲ್ ಹೊಸ ರೀತಿಯ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮಂತ್ರವಾದಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಡುತ್ತಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಕಥಾಹಂದರ ಒಳಗೊಂಡಿದೆ.