Sunday, 15th December 2024

300 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾದ ‘ಕೋಟಿಗೊಬ್ಬ 3’

ಬೆಂಗಳೂರು: ಆಯುಧ ಪೂಜೆಯೆಂದು ಬಿಡುಗಡೆಯಾಗಬೇಕಿದ್ದ ‘ಕೋಟಿಗೊಬ್ಬ 3’ ವಿಜಯದಶಮಿ ದಿನ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ರಾಜ್ಯಾದ್ಯಂತ ಶುಕ್ರವಾರ ‘ಕೋಟಿಗೊಬ್ಬ 3’ ಸಿನಿಮಾ 300 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಯಾಗುತ್ತಿದೆ. ಕೊನೆಕ್ಷಣದಲ್ಲಿ ವಿತರಕರನ್ನು ಬದಲಾವಣೆ ಮಾಡಿ ಜಾಕ್ ಮಂಜು ಮತ್ತು ಗಂಗಾಧರ್ ಸಾರಥ್ಯ ದಲ್ಲಿ ಇಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ 3’ ಬಿಡುಗಡೆಯಾಗಲಿದೆ.

ಇಂದು ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ಭರ್ಜರಿಯಾಗಿ ಬಿಡುಗಡೆಯಾಗ್ತಿದ್ದು, ಬೆಳಗ್ಗೆ ಯಿಂದಲೇ ಶೋ ಶುರುವಾಗಿವೆ. ಥಿಯೇಟರ್ ಗಳ ಬಳಿ ಸುದೀಪ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ತಾಂತ್ರಿಕ ಕಾರಣಗಳಿಂದ ಗುರುವಾರ ಬಿಡುಗಡೆಯಾಗಬೇಕಿದ್ದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಶುಕ್ರವಾರ ಬಿಡುಗಡೆ ಯಾಗಿದೆ. ಗುರುವಾರ ಸಿನಿಮಾ ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಆಕ್ರೋಶಗೊಂಡಿದ್ದ ಸುದೀಪ್ ಅಭಿಮಾನಿಗಳು ಹಲವೆಡೆ ಥಿಯೇಟರ್ ಮೇಲೆ ಕಲ್ಲು ತೂರಾಟ ನಡೆಸಿದ್ದರು.