Saturday, 14th December 2024

‘ಲಾಫಿಂಗ್ ಬುದ್ದ’ ಸಿನಿಮಾದ ಚಿತ್ರೀಕರಣ ಪ್ರಾರಂಭ

ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ‘ಲಾಫಿಂಗ್ ಬುದ್ದ’ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ.

ಎಂ ಭರತ್ ರಾಜ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಮತ್ತು ತೇಜು ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಲಾಫಿಂಗ್ ಬುದ್ಧ ಸಿನಿಮಾ ಪೊಲೀಸ್ ಪೇದೆಯ ಸುತ್ತುತ್ತಾ, ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ತರುತ್ತಾರೆ ಎಂಬುದೇ ಚಿತ್ರದ ತಿರುಳಂತೆ. ಹಾಸ್ಯದ ಜತೆಗೆ ಭಾವನಾತ್ಮಕ ದೃಶ್ಯಗಳು ಸಹ ಸಿನಿಮಾದಲ್ಲಿ ಇರಲಿದ್ದು ಚಿತ್ರದ ಟೈಟಲ್ಲೇ ಇಂಟ್ರಸ್ಟಿಂಗ್ ಹುಟ್ಟುಹಾಕುವಂತಿದೆ.

ನಟನಾಗಿ ನಿರ್ದೇಶಕರಾಗಿ ಉತ್ತಮ ಸಿನೆಮಾ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಿಷಬ್ ಈ ಚಿತ್ರಕ್ಕೆ ಬಂಡ ವಾಳ ಹೂಡಲಿದ್ದಾರೆ.

ಕಾಫಿ ಗ್ಯಾಂಗ್ ಸ್ಟುಡಿಯೋಸ್ ಸಹಯೋಗದಲ್ಲಿ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಕಾಂತ್ ಮತ್ತು ವಿಕಾಸ್ ಸಹ ನಿರ್ಮಾಪಕರಾಗಿದ್ದಾರೆ. ವಿಷ್ಣು ವಿಜಯ್ ಅವರ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿರಲಿದೆ.

 
Read E-Paper click here