Tuesday, 12th November 2024

BBK 11: ಕಿಚ್ಚನ ಪಂಚಾಯಿತಿಯಲ್ಲಿ ಸೌಂಡ್ ಮಾಡಿದ ಜಗ್ಗು-ಹಂಸ ಡ್ಯುಯೆಟ್ ಸಾಂಗ್

Jagadish Hamsa and Kiccha Suddep

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಎರಡನೇ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆ ಅನೇಕ ವಿಚಾರಗಳನ್ನು ಮನವರಿಕೆ ಮಾಡಿದ್ದಾರೆ. ನಿಮ್ಮಲ್ಲಿ ಏನು ಬದಲಾವಣೆ ಆಗಬೇಕು, ಜನರು ಏನು ಬಯಸುತ್ತಿದ್ದಾರೆ ಎಂಬ ಕುರಿತು ಹಿಂಟ್ ಕೊಟ್ಟಿದ್ದಾರೆ. ಇದರ ನಡುವೆ ಅನೇಕ ತಮಾಷೆಯ ಮಾತುಗಳು ಕೂಡ ನಡೆದಿವೆ. ವಾರಪೂರ್ತಿ ಸಖತ್ ರಂಚಿಸಿದ ಜಗ್ಗು-ಹಂಸ ಲವ್​ ಸ್ಟೋರಿ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ.

ಕಳೆದ ವಾರ ಬಿಗ್ ಬಾಸ್‌ ಮನೆಯಲ್ಲಿ ಜಗದೀಶ್ ಮತ್ತು ಹಂಸ ನಡುವೆ ಆಗಾಗ ಮಾತಿನ ವಾರ್ ನಡೆಯುತ್ತಿತ್ತು. ಇದರ ಜೊತೆಗೆ ಜಗದೀಶ್ ಅವರು ಕಾಲೆಳೆಯುತ್ತಾ ಡ್ಯುಯೆಟ್ ಕೂಡ ಹಾಡಿದ್ದರು. ಇಬ್ಬರ ನಡುವಿನ ಬಾಂಡಿಂಗ್ ಬಗ್ಗೆ ಈಗ ವೀಕೆಂಡ್ ವೇದಿಕೆಯಲ್ಲಿ ಚರ್ಚೆ ಆಗಿದೆ. ಸುದೀಪ್ ಅವರು, ‘ಜಗದೀಶ್ ಅವ್ರೇ, ಹಂಸ ಕ್ಯಾಪ್ಟನ್ ಆಗಿದ್ದಾಗ ನಿಮಾಗೆ ಸಿಕ್ಕ ಸೌಲಭ್ಯಗಳೇನು’ ಎಂದು ಕೇಳಿದ್ದಾರೆ. ಅದಕ್ಕೆ ಜಗದೀಶ್ ‘ಬೇಜಾರಾದ್ರೆ ನನ್ನ ಜೊತೆಗೆ ಡ್ಯುಯೆಟ್ ಹಾಡುತ್ತಿದ್ದರು’ ಎಂದು ಹೇಳಿದ್ದಾರೆ.

ಜಗದೀಶ್ ಕರೆದಾಗ ಹಂಸ ಕೂಡ ಬರ್ತಾ ಇದ್ದರು ಎಂಬುದನ್ನು ಸುದೀಪ್ ಒತ್ತಿ ಹೇಳಿದ್ದಾರೆ. ‘ಜಗದೀಶ್ ಜೊತೆಗೆ ವಾದ ಮಾಡಿ ಗೆಲ್ಲೋಕೆ ಆಗೋದಿಲ್ಲ. ಆದರೆ, ಮನಸು ಗೆದ್ದು ಕೆಲಸ ಮಾಡಿಕೊಂಡರಾಯಿತು’ ಎಂದು ಹಂಸ ಹೇಳಿದ್ದಾರೆ. ಇದನ್ನ ಕೇಳಿ ಸುದೀಪ್ ಶಾಕ್ ಆಗಿದ್ದಾರೆ. ಈ ಮಾತು ಕೇಳಿ ಇಡೀ ಮನೆ ನಗಾಡಿದೆ. ಹಾಗೇನೆ ಕಿಚ್ಚನ ಪಂಚಾಯತಿಯಲ್ಲಿ ಹಂಸ ಮತ್ತು ಲಾಯರ್ ಜಗದೀಶ್ ಮುಂಗಾರು ಮಳೆಯ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಕಳೆದ ವಾರ ಕ್ಯಾಪ್ಟನ್ ಆದ ಬಳಿಕ ಗುರ್… ಎನ್ನುತ್ತಿದ್ದ ಹಂಸ ಅವರು ಜದೀಶ್ ಕಾಟವನ್ನ ಕಾಮಿಡಿ ಆಗಿ ತೆಗೆದುಕೊಂಡು ಮನೆಯವರನ್ನು ಹಾಗೂ ಪ್ರೇಕ್ಷಕರನ್ನು ರಂಚಿಸುತ್ತಿದ್ದರು. ಹಂಸ ಅವರನ್ನ ‘ಹಮ್ಸ್‌’ ಎಂದು ಜಗದೀಶ್ ಕರೆಯುತ್ತಿದ್ದಾರೆ. ಇದರ ಜೊತೆಗೆ ಐ ಲವ್ ಯು ಕ್ಯಾಪ್ಟನ್ ಅಂತಲೇ ಪ್ರಪೋಸ್ ಕೂಡ ಮಾಡಿದ್ದರು. ಇದಿಷ್ಟೆ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಮುಂಗಾರು ಮಳೆ ಸಿನಿಮಾದ ಸೀನ್ ಒಂದು ರಿಕ್ರಿಯೇಟ್ ಆಗಿತ್ತು. ಪೂಜಾ ಗಾಂಧಿ ತರ ಹಂಸ ಅವರು ಜಗದೀಶ್ ಎದೆಗೆ ಕಾಲಿಟ್ಟು ಫೇಮಸ್ ಸೀನ್ ಅನ್ನು ರಿಕ್ರಿಯೇಟ್ ಮಾಡಿದ್ದರು.

BBK11 : ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್‌‌ಬೈ! ಅಧಿಕೃತ ಹೇಳಿಕೆ ಪ್ರಕಟ