Saturday, 14th December 2024

Lawyer Jagadish: ಬಿಗ್ ಬಾಸ್​ನಿಂದ ಹೊರಬಂದ ಜಗದೀಶ್ ಮೊದಲ ಪ್ರತಿಕ್ರಿಯೆ: ಏನಂದ್ರು?, ಇಲ್ಲಿದೆ ನೋಡಿ

Lawyer Jagadish Statement

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ದೊಡ್ಡ ಹೈ-ಡ್ರಾಮ ನಡೆದಿರುವ ವಿಚಾರ ಇಡೀ ಕರ್ನಾಟಕಕ್ಕೆ ತಿಳಿದಿದೆ. ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ ಕಾರಣಕ್ಕೆ ಜಗದೀಶ್ ವಿರುದ್ಧ ಕೆಲ ಸರ್ಧಿಗಳು ತಿರುಗಿಬಿದ್ದಿದ್ದರು. ಈ ಗಲಾಟೆ ದೊಡ್ಡ ಮಟ್ಟಕ್ಕೆ ಹೋಗಿತ್ತು. ಒಂದು ಹಂತದಲ್ಲಿ ರಂಜಿತ್ ಅವರು ಜಗದೀಶ್ ಅವರನ್ನು ತಳ್ಳಿದ್ದಾರೆ. ಇದೇ ಕಾರಣಕ್ಕೆ ಇದೀಗ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ರಂಜಿತ್ ಕೂಡ ಮನೆಯಿಂದ ಔಟ್ ಆಗಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಜಗದೀಶ್ ಅವರು ದೊಡ್ಮನೆಯಿಂದ ಹೊರಬಂದ ಬಳಿಕ ತಮ್ಮ ಮೊದಲ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ‘‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್ ಬಾಸ್ ವರ್ಕ್ ಫೋರ್ಸ್, ಆ ಡೈರೆಕ್ಟರ್, ಆ ಮಾಂತ್ರಿಕ ಟೆಕ್ನೀಶಿಯನ್ಸ್, ಅವರ 24/7 ಡೆಡಿಕೇಷನ್ ಹಾಗೂ ನನ್ನ 20 ಕೋಟಿ ಗು ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ನಿಮಗೆ ಕೋಟಿ ಕೋಟಿ ನಮನ’’ ಎಂದು ಹೇಳಿದ್ದಾರೆ.

‘‘ನಿಮ್ಮ ಪ್ರತಿ ಒಂದು ಚಪ್ಪಾಳೆ, ಮೆಸೇಜ್, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣಕ್ಕೆ ತೃಪ್ತಿ ಕೊಟ್ಟಿದೆ. ಇದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ,  ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.

ಇದಲ್ಲದೆ ಮನೆಯಿಂದ ಹೊರಬರಲು ಕಾರಣವಾದ ರಂಜಿತ್ ಮತ್ತು ಮಾನಸ ಅವರಿಗೆ ಕ್ಷಮೆ ಕೇಳಿದ್ದಾರೆ. ‘‘ನೀವು ಎಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅಧ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಲು ಪ್ರಯತ್ನ ಪಟ್ಟೆ?. ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿದೆ, ಅದು ನಟನೆಯ ( entertainment) ಒಂದು ಭಾಗ, ಇದರಲ್ಲಿ ಯಾವುದೇ ವೈಯಕ್ತಿಕ ಇಲ್ಲ. ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ,’’ ಎಂದು ಜಗದೀಶ್ ಅವರು ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿ:

ಜಕ್ಕೂರು ಏರೋಡ್ರೋಮ್ ಪ್ರವೇಶದ್ವಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ ಎಂದು ಜಗದೀಶ್ ಹೇಳಿದ್ದಾರೆ.

BBK 11: ಆ ಮನುಷ್ಯ ಬಿಗ್ ಬಾಸ್​ನಲ್ಲಿರಬೇಕು: ಜಗದೀಶ್​ನ ಮನೆಯಿಂದ ಕಳುಹಿಸಬೇಡಿ ಎಂದ ಚೈತ್ರಾ-ಭವ್ಯಾ