Sunday, 15th December 2024

’ಕ್ಲಾಸ್‌ ಆಫ್ 2020’ ನಟಿ ಲೀನಾ ಆಚಾರ್ಯ ನಿಧನ

ಮುಂಬೈ: ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಲೀನಾ ಆಚಾರ್ಯ ಅವರು ಮೂತ್ರಪಿಂಡ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

ನಟ ರೋಹನ್‌ ಮೆಹ್ರಾ ಅವರು “ಕ್ಲಾಸ್‌ ಆಫ್ 2020′ ನಲ್ಲಿ ಆಚಾರ್ಯ ಜತೆಗೆ ನಟಿಸಿದ್ದರು. ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಆಯುಷ್‌ ಆನಂದ್‌ ಲೀನಾ ತನಗೆ, ಇದ್ದ ಆರೋಗ್ಯ ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಂಡಿರಲಿಲ್ಲ.

2018-2019ರಲ್ಲಿ ಆಚಾರ್ಯ ಅವರೊಂದಿಗೆ ಪರ್ಫೆಕ್ಟ್ ಪತಿಯಲ್ಲಿ ಕೆಲಸ ಮಾಡಿದ ನಟ ಆಯುಷ್ ಆನಂದ್ ಹೇಳುವಂತೆ ಲೀನಾ ಅವರು ಚಿತ್ರೀಕರಣದ ವೇಳೆ ಯಾವತ್ತೂ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿಕೊಂಡಿರಲಿಲ್ಲ ಅಲ್ಲದೆ ತಮ್ಮ ನಗುಮೊಗದಲ್ಲೇ ಎಲ್ಲರೊಂದಿಗೆ ಬೆರೆಯುತ್ತಿದ್ದಳು ಎಂದು ಹೇಳಿದ್ದಾರೆ.