Sunday, 15th December 2024

ಸಲ್ಮಾನ್ ಖಾನ್’ನಿಂದ ಶಸ್ತ್ರಾಸ್ತ್ರ ಪರವಾನಗಿ ಮನವಿ

ಮುಂಬೈ: ನಟ ಸಲ್ಮಾನ್ ಖಾನ್ ಶುಕ್ರವಾರ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಪನ್ಸಾಲ್ಕರ್ ಅವರನ್ನು ಭೇಟಿಯಾದರು.

ದಕ್ಷಿಣ ಮುಂಬೈನಲ್ಲಿ ಕ್ರಾಫರ್ಡ್ ಮಾರ್ಕೆಟ್ ಎದುರು ಇರುವ ಮುಂಬೈ ಪೊಲೀಸ್ ಪ್ರಧಾನ ಕಛೇರಿಗೆ ತಮ್ಮ ಕಾರಿನಲ್ಲಿ ಆಗಮಿಸಿದ ಸಲ್ಮಾನ್ ಖಾನ್ ಕಚೇರಿಯಲ್ಲಿ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿಯಾಗಿ ಬೆದರಿಕೆ ಕುರಿತಾಗಿ ಸಮಾಲೋಚನೆ ನಡೆಸಿದ್ದಾರೆ.

ಬೆದರಿಕೆ ಪತ್ರ ಸ್ವೀಕರಿಸಿದ ನಂತರ, 56 ವರ್ಷದ ನಟ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಮುಂಬೈ ಪೊಲೀಸರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿ ದ್ದಾರೆ. ಪರವಾನಗಿ ವಿಚಾರದಲ್ಲಿ ಸಲ್ಮಾನ್ ಮುಂಬೈ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿದ್ದಾರೆ.

ಜೂನ್‌ನಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ, ಹಿರಿಯ ಬರಹಗಾರ-ನಿರ್ಮಾಪಕ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು.