Friday, 22nd November 2024

ಐಎಸ್ಡಿ ವಿಚಾರಣೆ ಒಪ್ಪಿಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು: ಸ್ಯಾಂಡಲ್‍ವುಡ್‍ ಡ್ರಗ್‍ ನಂಟು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ಲೂಸ್ ಮಾದ ಯೋಗೇಶ್ ಅ ವರು ಮಂಗಳವಾರ ಐಎಸ್ಡಿ ವಿಚಾರಣೆಗೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಸೋಮವಾರ ಐಎಸ್ಡಿ ವಿಚಾರಣೆಗೆ ಹೋಗಿಲ್ಲ ಎಂದಿದ್ದ ಯೋಗಿ, ವಿಚಾರಣೆ ವೇಳೆ ರಾಗಿಣಿ ಬಗ್ಗೆ ಪ್ರಶ್ನೆ ಕೇಳಿಲ್ಲ ನಾನು ತಪ್ಪು ಮಾಡಿಲ್ಲ, ಧೈರ್ಯವಾಗಿ ಹೇಳ್ತೀನಿ. ಡ್ರಗ್ ಪೆಡ್ಲರ್ ಗಳನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸ ಇಲ್ಲ. ಡ್ರಗ್ ಪೆಡ್ಲರ್ ವಿರೇನ್ ಖನ್ನಾ, ಆಳ್ವಾ ಜತೆ ನನಗೆ ಲಿಂಕ್ ಇಲ್ಲ ಎಂದು ಹೇಳಿದರು.

ಯೋಗಿ ಖಿನ್ನತೆಗೆ ನಾನೇ ಕಾರಣ. ಸಾಲು ಸಾಲು ಚಿತ್ರ ಒಪ್ಪಿಕೊಂಡಿದ್ದೇ ನನ್ನಿಂದ. ಯೋಗಿ ಮಾಡಿದ ಎಲ್ಲ ಚಿತ್ರಗಳೂ ಸೋತವು. ಹಾಗಾಗಿ ಖಿನ್ನತೆಗೆ ಒಳಗಾಗಿದ್ದ ಎಂದು ಯೋಗಿ ತಂದೆ ಸಿದ್ದರಾಜು ಹೇಳಿಕೆ ನೀಡಿದ್ದಾರೆ. ನಾನೂ ನಿರ್ಮಿಸಿದ್ದ ಚಿತ್ರಗಳೂ ಸೋತಿದ್ದವು. ಆದರೆ, ನನ್ನ ಮಗನಿಗೆ ಯಾವುದೇ ದುರಭ್ಯಾಸ ಇಲ್ಲ. ವಿಚಾರಣೆಗೆ ಕರೆದಿರುವ ಬಗ್ಗೆ ಬೇಸರವೂ ಇಲ್ಲ. ಆದರೆ ಇದು ಅಚ್ಚರಿ ಮೂಡಿಸಿದೆ ಎಂದು ಯೋಗಿ ತಾಯಿ ಹೇಳಿಕೆ ನೀಡಿದ್ದಾರೆ.