ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಭಾಗ್ಯಶ್ರೀ ಅಭಿನಯದ ಬ್ಲಾಕ್ ಬಸ್ಟರ್ ರೊಮ್ಯಾಂಟಿಕ್ ಡ್ರಾಮಾ ‘ಮೈನೆ ಪ್ಯಾರ್ ಕಿಯಾ’ 35 ವರ್ಷಗಳ ನಂತರ ಮರು ಬಿಡುಗಡೆಯಾಗುತ್ತಿದೆ.
ಚಿತ್ರದ 35 ನೇ ವಾರ್ಷಿಕೋತ್ಸವ ಗುರುತಿಸಲು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡಲು ಸಿದ್ಧವಾಗಿದೆ.
1989ರಲ್ಲಿ ಬಿಡುಗಡೆಯಾದ ನಂತರ, ಪ್ರೇಮ್(ಸಲ್ಮಾನ್) ಮತ್ತು ಸುಮನ್(ಭಾಗ್ಯಶ್ರೀ) ಪ್ರಮುಖ ಪಾತ್ರಗಳು ಮನೆಮಾತಾದವು. ಈ ಇಬ್ಬರು ಮತ್ತೆ ದೊಡ್ಡ ಪರದೆಯ ಮೇಲೆ ಪ್ರೇಕ್ಷಕರ ಹೃದಯವನ್ನು ಗೆಲ್ಲಲು ಬರುತ್ತಿದ್ದಾರೆ.
‘ಮೈನೆ ಪ್ಯಾರ್ ಕಿಯಾ’ದ ಸೃಷ್ಟಿಕರ್ತ ರಾಜಶ್ರೀ ಪ್ರೊಡಕ್ಷನ್ಸ್ರ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸುದ್ದಿಯನ್ನು ಪ್ರಕಟಿಸಿದೆ. ’23 ಆಗಸ್ಟ್ ರಂದು Maine Pyar Kiya ಮರು-ಬಿಡುಗಡೆ ಮಾಡುವ ಸಮಯ ಬಂದಿದೆ ಎಂದು ತಿಳಿಸಿದೆ.
ರಾಜಶ್ರೀ ಪ್ರೊಡಕ್ಷನ್ಸ್ ನಿಂದ ಈ ಮಾಹಿತಿ ಘೋಷಣೆಯಾದ ಕೂಡಲೇ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಲ್ಮಾನ್ ಮತ್ತು ಭಾಗ್ಯಶ್ರೀ ಅವರಲ್ಲದೆ, ಚಿತ್ರದಲ್ಲಿ ಮೊಹ್ನಿಶ್ ಬಹ್ಲ್, ರೀಮಾ ಲಾಗೂ, ಅಲೋಕ್ ನಾಥ್, ಲಕ್ಷ್ಮೀಕಾಂತ್ ಬೆರ್ಡೆ ಮತ್ತು ಅಜಿತ್ ವಚಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.