Wednesday, 11th December 2024

ಮಲೆಯಾಳದ ನಟಿ, ಟಿ.ವಿ ನಿರೂಪಕಿ ಸುಬಿ ಸುರೇಶ್‌ ನಿಧನ

ಕೊಚ್ಚಿ: ಮಲೆಯಾಳದ ಪ್ರಸಿದ್ಧ ನಟಿ, ಟಿ.ವಿ ನಿರೂಪಕಿ ಸುಬಿ ಸುರೇಶ್‌ (41) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಬಿ ಅವರು ಕೆಲವು ದಿನಗಳಿಂದ ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದರು.

ಸುಬಿ ಅವರಿಗೆ ಪೋಷಕರು ಹಾಗೂ ಒಬ್ಬ ಸಹೋದರ ಇದ್ದಾರೆ. ಹಾಸ್ಯ ಪಾತ್ರ ಹಾಗೂ ವೇದಿಕೆ ಮೇಲೆ ಅವರ ನಿರರ್ಗಳ ಮಾತು ಗಾರಿಕೆಯ ಕೌಶಲಕ್ಕಾಗಿ ಸುಬಿ ಅವರು ‍ಪ್ರಸಿದ್ಧಿ ಗಳಿಸಿದ್ದರು. ಜೊತೆಗೆ ದೊಡ್ಡ ಸಮೂಹದ ಅಭಿಮಾನಿ ಬಳಗವನ್ನು ಹೊಂದಿ ದ್ದರು.

ಕೊಚ್ಚಿ ಕಲಾಭವನ ತಂಡದಲ್ಲಿ ಮಿಮಿಕ್ರಿ ಕಲಾವಿದೆಯಾಗಿ ವೃತ್ತಿ ಆರಂಭಿಸಿದ ಅವರು, ಪುರುಷರೇ ಪ್ರಧಾನವಾಗಿದ್ದ ಹಾಸ್ಯ ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆದುಕೊಂಡಿದ್ದರು.