Thursday, 12th December 2024

ನಟ ಮನೋಜ್ ಬಾಜಪೇಯಿ ತಂದೆ ನಿಧನ

ನವದೆಹಲಿ: ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್.ಕೆ. ಬಾಜಪೇಯಿ(83 )ಅವರು ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು.

ಆರ್‌.ಕೆ. ಬಾಜಪೇಯಿ ಅವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ತಂದೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಸುದ್ದಿ ತಿಳಿದ ನಂತರ ಮನೋಜ್ ಕೇರಳದಿಂದ ದೆಹಲಿಗೆ ಧಾವಿಸಿದ್ದರು.

ಭಾನುವಾರ ಮಧ್ಯಾಹ್ನ ನವದೆಹಲಿಯ ನಿಗಮ್ ಬೋಧ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು.