Wednesday, 11th December 2024

ಮರಾಠಿ ಹಿರಿಯ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆ

ಪುಣೆ: ರಾಠಿ ಹಿರಿಯ ನಟ ರವೀಂದ್ರ ಮಹಾಜನಿ(74)(Ravindra Mahajani) ಅವರ ಮೃತದೇಹ ಅವರು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.

ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಅಂಬಿ ಗ್ರಾಮದ ಮನೆಯಲ್ಲಿ ಶವವಾಗಿ ಪತ್ತೆ ಯಾಗಿದ್ದಾರೆ. ಅವರ ಬಾಡಿಗೆ ಮನೆಯ ಕೊಠಡಿ ಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ನಟ ಗಶ್ಮೀರ್ ಮಹಾಜನಿ (Gashmir Mahajani) ತಂದೆ ನಟ ರವೀಂದ್ರ ಮಹಾಜನಿ ಅವರು ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ಆಪರೇಷನ್ ನಂತರ ಅಂಬಿ ಗ್ರಾಮದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.

ಅವರು ವಿಧಿವಶರಾಗಿದ್ದು ಕುಟುಂಬಸ್ಥರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿ ಗಳು ಕಂಬನಿ ಮಿಡಿದಿದ್ದಾರೆ. ತಾಳೆಗಾಂವ್ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಟ ರವೀಂದ್ರ ಮಹಾಜನಿ ಅವರು ಕಳೆದ 9 ತಿಂಗಳಿಂದ ಮಾವಲ್ ತಾಲೂಕಿನ ಅಂಬಿ ಗ್ರಾಮದ ಎಕ್ಸರ್ಬಿಯಾ ಸೊಸೈಟಿಯಲ್ಲಿ ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ರವೀಂದ್ರ ಮಹಾಜನಿ ಅವರು ಅನೇಕ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜುಂಜ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದು, ದೇವತಾ ಚಿತ್ರದ ಲಖನ್ ಪಾತ್ರ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.