ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಕಥೆಯ ಕಂಟೆಂಟ್‌ಗಳು ಹಾಗೂ ನಿರೂಪಣೆಯಲ್ಲಿ ಹೊಸತನವಿರುವ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈಗ ಈ ಸಾಲಿಗೆ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಸೇರಿದ್ದು (Maryade Prashne Movie), ಈಗಾಗಲೇ ಇದು ವಿಭಿನ್ನ ಶೀರ್ಷಿಕೆ ಮೂಲಕ ಸದ್ದು ಮಾಡಿದೆ. ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ.
ಬೆಂಗಳೂರಿನ ಹೈಡ್ ಪಾರ್ಕ್ ಹೋಟೆಲ್‌ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಗೆ ಕರೆದು ಈ ಮಾಹಿತಿಯನ್ನು ಹಂಚಿಕೊಂಡಿದೆ. ಸಕ್ಕತ್ ಸ್ಟುಡಿಯೋದ ಸಂಸ್ಥಾಪಕ ಆರ್.ಜೆ. ಪ್ರದೀಪ್, ನಿರ್ದೇಶಕ ನಾಗರಾಜ್ ಸೋಮಯಾಜಿ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಿರ್ಮಾಪಕ ಆರ್.ಜೆ.ಪ್ರದೀಪ್ ಮಾತನಾಡಿ, ʼʼಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಮಾಡಬೇಕು ಅನ್ನೋದು ಇತ್ತು. ನಾನು ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು. ಹೀಗೆ ಶುರುವಾದ ಜರ್ನಿ ನಾವು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದೊಳ್ಳೆ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ಡೇಟ್ ಫಿಕ್ಸ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆʼʼ ಎಂದರು.
ನಾಗರಾಜ್ ಸೋಮಯಾಜಿ ಮಾತನಾಡಿ, ʼʼನಾನು ಪ್ರದೀಪ್ ಕ್ಲೋಸ್ ಫ್ರೆಂಡ್ಸ್. ಅದ್ಭುತ ತಾರಾಬಳಗ, ಪ್ರೇಕ್ಷಕರಿಗೆ ಇಷ್ಟವಾಗುವ ನೈಜತೆ ಇರುವ ಸಿನಿಮಾ ಮಾಡಿದ್ದೇವೆ. ತಾರಾಬಳಗದ ಜೊತೆಗೆ ನಮ್ ಟೆಕ್ನಿಕಲ್ ಟೀಂ ಕೂಡ ಸ್ಟ್ರಾಂಗ್ ಆಗಿದೆ. ಈ ಸಿನಿಮಾ ಜನಕ್ಕೆ ತಲುಪಿಸಲು ನಿಮ್ಮ ಪ್ರೀತಿ ಬೇಕು. ಉಳಿದದ್ದನ್ನು ಜನ ದುಪ್ಪಟ್ಟು ಮಾಡುತ್ತಾರೆʼʼ ಎಂದು ಹೇಳಿದರು.
ನವೆಂಬರ್ 22ಕ್ಕೆ ರಿಲೀಸ್
ಒಂದು ಯಶಸ್ವಿ ಚಿತ್ರ ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಗಮನಸೆಳೆಯುತ್ತದೆಯೋ ಆ ಎಲ್ಲ ರೀತಿಯಿಂದಲೂ ಸದ್ದು ಮಾಡುತ್ತಾ ಸಾಗುತ್ತಿರುವ ಫ್ಯಾಮಿಲಿ ಎಂಟರ್ ಟೈನರ್ ʼಮರ್ಯಾದೆ ಪ್ರಶ್ನೆʼ ಚಿತ್ರ ನವೆಂಬರ್ 22ಕ್ಕೆ ಬಿಡುಗಡೆಯಾಗಲಿದೆ. ಆಕರ್ಷಕ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಚಿತ್ರದ ಪೋಸ್ಟರ್ ಇದೊಂದು ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಎನ್ನುವುದನ್ನು ಸಾರಿ ಹೇಳಿದೆ. ರಾಜ್ಯ ಮಾತ್ರವಲ್ಲ ಹೈದರಾಬಾದ್, ಚೆನ್ನೈ ಸೇರಿದಂತೆ ಬೇರೆ ರಾಜ್ಯಗಳ ನಗರಗಳ ಜತೆಗೆ ವಿದೇಶದಲ್ಲಿಯೂ ʼಮರ್ಯಾದೆ ಪ್ರಶ್ನೆʼ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ನಿರ್ದೇಶಕ ನಾಗರಾಜ್ ಸೋಮಯಾಜಿ ಈ ಹಿಂದೆ ʼದಿ ಬೆಸ್ಟ್ ಆ್ಯಕ್ಟರ್ʼ ಮೈಕ್ರೋ ಮೂವಿ ಮಾಡಿದ್ದರು. ʼಮರ್ಯಾದೆ ಪ್ರಶ್ನೆʼ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vettaiyan Movie Review: ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಿದ ರಜನಿಕಾಂತ್; ʼವೆಟ್ಟೈಯಾನ್ʼ ಚಿತ್ರ ಹೇಗಿದೆ?