ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರ ʻಮೌರ್ಯʼ, ʻಅರಸುʼ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ (83) ಅವರು ಕೇರಳದ ಎರ್ನಾಕುಲಂನಲ್ಲಿ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಜೋಸೆಫ್ ಫಿಲಿಪ್ ಬಳಲುತ್ತಿದ್ದರು ಎನ್ನಲಾಗಿದೆ. ಜೋಸೆಫ್ ಫಿಲಿಪ್ ಅಂತ್ಯಕ್ರಿಯೆ ಭಾನುವಾರ (ಏ.7) ಕೇರಳದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಮೀರಾ ಅವರ ಪೋಸ್ಟ್ ಮೊದಲ ಫೋಟೊದಲ್ಲಿ ತಂದೆಯ ಹಳೆಯ ಫೋಟೊ ಮತ್ತು ಇನ್ನೆರಡು ಚಿತ್ರಗಳಲ್ಲಿ ಕುಟುಂಬದ ಜತೆ ಇರುವ ಫೋಟೊ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ಮೀರಾ, “ನಾವು ಮತ್ತೆ ಭೇಟಿಯಾಗುವವರೆಗೆ” ಎಂದು ಬರೆದು ಬಿಳಿ ಹೃದಯದ ಇಮೋಜಿ ಬರೆದುಕೊಂಡಿದ್ದಾರೆ.
2004ರ ‘ಅಮ್ಮಾಯಿ ಬಾಗುಂಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ಮೀರಾ ಜಾಸ್ಮಿನ್. 2013ರ ರೋಮ್ಯಾನ್ಸ್ ಡ್ರಾಮಾ ಚಿತ್ರ ‘ಗುಡುಂಬಾ ಶಂಕರ್’ ನಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರೊಂದಿಗೆ ಅವರ ಹಾಡುಗಳು ಇಂದಿಗೂ ಟಾಲಿವುಡ್‌ನಲ್ಲಿ ಎವರ್‌ಗ್ರೀನ್ ಹಿಟ್ ಆಗಿವೆ. ಅವರ ಕೊನೆಯ ತೆಲುಗು ಚಿತ್ರ ‘ಮೋಕ್ಷ’ ಮತ್ತು ನಂತರ ಅವರು 2014 ರಲ್ಲಿ ಮದುವೆಯಾಗಿ ಟಾಲಿವುಡ್ ತೊರೆದರು. ಬಳಿಕ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು.
ಜಾಸ್ಮಿನ್ ಅವರು ತಮಿಳಿನಲ್ಲಿ ಅಭಿನಯಿಸಿದ ʻರನ್ʼ ಮತ್ತು ʻಬಾಲ 2′ ಚಿತ್ರಗಳು ಯಶಸ್ಸು ಕಂಡವು. ಅಂದಿನಿಂದ ತೆಲುಗಿನಲ್ಲೂ ನಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿಯ ಕೊನೆಯ ಸಿನಿಮಾ ‘ವಿಮಾನಂ’. ಮಲಯಾಳಂನ ‘ಕ್ವೀನ್ ಎಲಿಜಬೆತ್’ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಮುಂದೆ, ಅವರು ಎಸ್ ಶಶಿಕಾಂತ್ ಅವರ ‘ದಿ ಟೆಸ್ಟ್’ ಸಿನಿಮಾ ಹೊಂದಿದ್ದಾರೆ.