Monday, 28th October 2024

Mirzapur The Film: ಸಿನಿಮಾವಾಗಿ ತೆರೆಗೆ ಬರಲು ʼಮಿರ್ಜಾಪುರʼ ಸೀರಿಸ್‌ ರೆಡಿ; ಯಾವಾಗ ರಿಲೀಸ್‌?

Mirzapur The Film

ಮುಂಬೈ: ಪ್ರೈಂ ವಿಡಿಯೊ (Prime Video)ದ ಸೂಪರ್‌ ಹಿಟ್‌ ಹಿಂದಿ ಸೀರಿಸ್‌ ʼಮಿರ್ಜಾಪುರʼದ ಅಭಿಮಾನಿಗಳಿಗೆ ಗುಡ್‌ನ್ಯೂಸ್‌. 3 ಭಾಗಗಳಲ್ಲಿ ಸ್ಟ್ರೀಮಿಂಗ್‌ ಆದ ಈ ಸೀರಿಸ್‌ ಇದೀಗ ಚಿತ್ರವಾಗಿ ತೆರೆಗೆ ಬರಲು ಸಜ್ಜಾಗಿದೆ. ಕ್ರೈಂ ಲೋಕದ ಕರಾಳ ಕಥೆಯನ್ನು ಅನಾವರಣಗೊಳಿಸಿದ ʼಮಿರ್ಜಾಪುರʼ ಸಿನಿಮಾ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. 2026ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ (Mirzapur The Film).

ಕಲೀನ್‌ ಭೈಯ್ಯಾ ಆಗಿ ಪ್ರಂಕಜ್‌ ತ್ರಿಪಾಠಿ, ಗುಡ್ಡು ಪಂಡಿತ್‌ ಆಗಿ ಅಲಿ ಫಾಸಲ್‌, ಮುನ್ನ ತ್ರಿಪಾಠಿಯಾಗಿ ದಿವ್ಯೇಂದು ಮತ್ತಿತರರು ʼಮಿರ್ಜಾಪುರʼದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದುವರೆಗೆ ಪ್ರಸಾರವಾದ 3 ಸೀಸನ್‌ಗಳೂ ಸೂಪರ್‌ ಹಿಟ್‌ ಆಗಿವೆ. ಈಗಾಗಲೇ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಮಿರ್ಜಾಪುರದ ಲೋಕ ಇನ್ನು ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ. ಸೀರಿಸ್‌ನಲ್ಲಿ ಮಿಂಚಿದ ಬಹುತೇಕ ಕಲಾವಿದರು ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಎಕ್ಸೆಲ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ಗಾಗಿ ರಿತೇಶ್‌ ಸಿಧ್ವಾನಿ ಮತ್ತು ಫರ್ಹಾನ್‌ ಅಖ್ತರ್‌ ಅವರು ʼಮಿರ್ಜಾಪುರʼ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಪುನೀತ್‌ ಕೃಷ್ಣ ಚಿತ್ರಕ್ಕೆ ಕಥೆ, ಗುರ್ಮೀತ್‌ ಸಿಂಗ್‌ ನಿರ್ದೇಶಿಸಲಿದ್ದಾರೆ.

ʼಮಿರ್ಜಾಪುರʼ ಸೀರಿಸ್‌ ಬಗ್ಗೆ…

2018ರಲ್ಲಿ ʼಮಿರ್ಜಾಪುರʼ ಸರಣಿಯ ಮೊದಲ ಸೀಸನ್‌ ಹೊರ ಬಂದಿತ್ತು. ಅಪರಾದ ಜಗತ್ತಿನ ಕರಾಳ ಮುಖ ತೆರೆದಿಟ್ಟ ಈ ಸೀಸನ್‌ ಅನೇಕರ ಗಮನ ಸೆಳೆದಿತ್ತು. ಪಂಕಜ್‌ ತ್ರಿಪಾಠಿ, ಅಲಿ ಘಜಲ್‌ ಅವರ ಪಾತ್ರ ಅನೇಕರ ಗಮನ ಸೆಳದಿತ್ತು. ಪರಿಣಾಮವಾಗಿ ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಇದರ ಯಶಸ್ಸಿನಿಂದ ಪ್ರೇರಿತರಾಗಿ ಎರಡನೇ ಸೀಸನ್‌ ತಯಾರಿಸಲಾಗಿತ್ತು.

ʼಮಿರ್ಜಾಪುರʼ ಸೀಸನ್‌ನ 2ನೇ ಸೀಸನ್‌ 2020ರಲ್ಲಿ ಸ್ಟ್ರೀಮಿಂಗ್‌ ಆಗಿತ್ತು. ಇದು ಕೂಡ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಹೀಗಾಗಿ 3ನೇ ಸೀಸನ್‌ ಕೂಡ ತಯಾರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ʼಮಿರ್ಜಾಪುರʼ 3 ಕೂಡ ಸೂಪರ್‌ ಹಿಟ್‌ ಆಗಿದೆ. ಮತ್ತೊಮ್ಮೆ ಪ್ರೇಕ್ಷಕರು ಎರಡೂ ಕೈ ಚಾಚಿ ಸ್ವಾಗತಿಸಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ಕುತೂಹಲ ಈಗಾಗಲೇ ಗರಿಗೆದರಿದೆ. ಈ ಸೀರಿಸ್‌ ಅನ್ನು ಸಿನಿಮಾ ರೂಪದಲ್ಲಿ ನೋಡಬೇಕೆಂಬ ಬಹುತೇಕರ ಕನಸು ನನಸಾಗುತ್ತಿದೆ.

2 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿಕೊಂಡಿರುವ ಪಂಕಜ್‌ ತ್ರಿಪಾಠಿ ಬಾಲಿವುಡ್‌ ಜತೆಗೆ ವಿವಿಧ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ಅಭಿನಯ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. 2003ರಲ್ಲಿ ತೆರೆಕಂಡ ʼಚಿಗುರಿದ ಕನಸುʼ ಕನ್ನಡ ಸಿನಿಮಾದಲ್ಲಿಯೂ ಪಂಕಜ್‌ ಅಭಿನಯಿಸಿದ್ದಾರೆ.

ಭೋಜಪುರಿ, ತಮಿಳು, ತೆಲುಗು, ಇಂಗ್ಲಿಷ್‌, ಪಂಜಾಬಿ ಸಿನಿಮಾದಲ್ಲಿಯೂ ಪಂಕಜ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪಂಕಜ್‌ ಅಭಿನಯದ ಬಾಲಿವುಡ್‌ನ ʼಸ್ತ್ರೀ 2ʼ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಅಮರ್‌ ಕೌಶಿಕ್‌ ನಿರ್ದೇಶನದ ಈ ಚಿತ್ರದಲ್ಲಿ ರಾಜ್‌ಕುಮಾರ್‌ ರಾವ್‌, ಶ್ರದ್ಧಾ ಕಪೂರ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಚಿತ್ರ 874 ಕೋಟಿ ರೂ.ಗಿಂತ ಅದಿಕ ಕಲೆಕ್ಷನ್‌ ಮಾಡಿದೆ.

ಈ ಸುದ್ದಿಯನ್ನೂ ಓದಿ: Rashmika Mandanna: ಬಾಲಿವುಡ್‌ನ ಮತ್ತೊಂದು ಅವಕಾಶ ಗಿಟ್ಟಿಸಿದ ರಶ್ಮಿಕಾ; ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟನಿಗೆ ಜೋಡಿ