Thursday, 3rd October 2024

Mokshagna Teja: ಚಿತ್ರರಂಗಕ್ಕೆ ಬಾಲಯ್ಯ ಪುತ್ರ ಎಂಟ್ರಿ; ಮೋಕ್ಷಜ್ಞ‌ ಮೊದಲ ಚಿತ್ರಕ್ಕೆ ಹನುಮಾನ್ ಡೈರೆಕ್ಷರ್ ಆ್ಯಕ್ಷನ್ ಕಟ್

Mokshagna Teja

ಹೈದರಾಬಾದ್: ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದಿಂದ ಮತ್ತೊಂದು ಕುಡಿ ಸಿನಿರಂಗ ಪ್ರವೇಶಿಸಿದೆ. ನಂದಮೂರಿ ತಾರಕ ರಾಮಾರಾವ್ (ಎನ್‌ಟಿಆರ್‌) ಅವರ ಮೊಮ್ಮಗ ಹಾಗೂ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ತೇಜ(Mokshagna Teja), ತಾತ-ತಂದೆಯಂತೆ ಚಿತ್ರರಂಗದಲ್ಲಿ ಹೆಸರು ಮಾಡುವ ಉತ್ಸಾಹದಿಂದ ಬಣ್ಣ ಹಚ್ಚಿದ್ದಾರೆ.

ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಹಿನ್ನೆಲೆಯಲ್ಲಿ, ನೆನ್ನೆ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಸ್ಟೈಲೀಶ್ ಲುಕ್‌ನಲ್ಲಿ ಮೋಕ್ಷಜ್ಞ ಕಾಣಿಸಿಕೊಂಡಿದ್ದು, ಬಾಲಯ್ಯ ಪುತ್ರನ ಎಂಟ್ರಿಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಮೋಕ್ಷಜ್ಞ ಹೊಸ ಸಿನಿಮಾವನ್ನು ‘ಹನುಮಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಎಸ್ಎ‌ಲ್‌ವಿ ಸಿನಿಮಾಸ್ ಹಾಗೂ ಲೆಜೆಂಡ್ ಪ್ರೊಡಕ್ಷನ್ ಬ್ಯಾನರ್‌ನಡಿ
ದಸರಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ಮಾಪಕ ಸುಧಾಕರ್ ಚೆರುಕುರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎಂ. ತೇಜಸ್ವಿನಿ ನಂದಮೂರಿ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ.

ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ, ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಬಾಲಯ್ಯ ಅವರು ನನ್ನ ಮೇಲೆ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ಕೊಟ್ಟಿದ್ದಾರೆ. ಇದಕ್ಕಾಗಿ ಬಾಲಯ್ಯ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಥೆ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಒಂದು ಭಾಗವಾಗಿದೆ ಎಂದಿದ್ದಾರೆ.

ಇದನ್ನೂ ಓದಿ | Maryade Prashne: ಸಕ್ಕತ್ ಸ್ಟುಡಿಯೊದ ಚೊಚ್ಚಲ ಕಾಣಿಕೆ ‘ಮರ್ಯಾದೆ ಪ್ರಶ್ನೆ’ ಶೀಘ್ರದಲ್ಲೇ ತೆರೆಗೆ

ಬಾಲಯ್ಯ ಪುತ್ರ ಮೋಕ್ಷಜ್ಞ ಯಾವಾಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ? ಅವರನ್ನು ಲಾಂಚ್ ಮಾಡುವ ನಿರ್ದೇಶಕ ಯಾರು ಎಂಬ ಪ್ರಶ್ನೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದ್ದವು. ಇದೀಗ ‘ಹನುಮಾನ್’ ಸಿನಿಮಾದ ಮೂಲಕ ಪ್ರಶಾಂತ್, ತಮ್ಮದೇ ಒಂದು ಸಿನಿಮ್ಯಾಟಿಕ್ ಯೂನಿವರ್ಸ್‌ ಅನ್ನು ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಂದಮೂರಿ ಮೋಕ್ಷಜ್ಞ ಸಿನಿಮಾ ಕೂಡ ಅದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಮೂಡಿಬರಲಿದೆ.

ಶುಭ ಕೋರಿದ ಜ್ಯೂ.ಎನ್‌ಟಿಆರ್‌

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಮೋಕ್ಷಜ್ಞ ತೇಜಗೆ ಟಾಲಿವುಡ್‌ ನಟರು, ನಿರ್ದೇಶಕರು ಸೇರಿ ಗಣ್ಯರು ಶುಭ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೂ. ಎನ್‌ಟಿಆರ್‌ ಪ್ರತಿಕ್ರಿಯಿಸಿ, ಸಿನಿಮಾ ಜಗತ್ತಿಗೆ ಆಗಮಿಸುತ್ತಿರುವುದಕ್ಕೆ ಅಭಿನಂದನೆಗಳು. ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿರುವ ನಿಮಗೆ ತಾತ (ಎನ್‌ಟಿಆರ್‌) ಹಾಗೂ ಆ ದೇವರ ಆಶೀರ್ವಾದ ಸಿಗಲೆಂದು ಕೋರುತ್ತೇನೆ ಎಂದು ಹಾರೈಸಿದ್ದಾರೆ.