ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ರೋಚಕತೆ ಸೃಷ್ಟಿಸಿದೆ. ಹಂಸ ಅವರು ಎಲಿಮಿನೇಟ್ ಆಗಿದ್ದು, ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ. ಸೇಫ್ ಆಗಿ ಮನೆಯೊಳಗೆ ಬಂದ ತಕ್ಷಣ ಮೋಕ್ಷಿತಾ ಅಬ್ಬರಿಸಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವೆ ದೊಡ್ಡ ಗಲಾಟೆ ನಡೆದಿದೆ. ಒಳಗೆ ಬರುತ್ತಿದ್ದಂತೆ ಮೋಕ್ಷಿತಾ ಅವರು ಇನ್ಮೇಲೆ ನನ್ನ ಆಟ ಶುರು, ಇಲ್ಲಿಂದ ಆಟ ಶುರುವಾಗುತ್ತದೆ ಎಂದು ಕೋಪದಲ್ಲಿ ಹೇಳಿದ್ದಾರೆ. ಇದೇ ಮಾತನ್ನು ಧರ್ಮಾ ಕೀರ್ತಿರಾಜ್ ಕೂಡ ಹೇಳಿದ್ದಾರೆ.
ಮೋಕ್ಷಿತಾ 10 ವಾರ ಇರ್ತಾರೆ ಅಷ್ಟೇ ಎಂದು ಉಗ್ರಂ ಮಂಜು ಬಳಿ ತ್ರಿವಿಕ್ರಮ್ ಹೇಳಿದ್ದರು. ಅದನ್ನ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಬಳಿ ಮಂಜು ಹೇಳಿಬಿಟ್ಟಿದ್ದಾರೆ. ಇಲ್ಲಿಂದ ಬೆಂಕಿ ಹತ್ತಿಕೊಂಡಿದೆ. ತಮ್ಮ ಮೇಲಿನ ತ್ರಿವಿಕ್ರಮ್ ಆರೋಪಕ್ಕೆ ಮೋಕ್ಷಿತಾ ಸಿಟ್ಟಾಗಿದ್ದಾರೆ. ನಾನು ಕೇವಲ 10 ವಾರಕ್ಕೆ ಬಂದಿಲ್ಲ. ಆಟ ಆಡೋಕೆ ಬಂದಿದ್ದೇನೆ ಅಂತಲೇ ರಿಯಾಕ್ಟ್ ಮಾಡಿದ್ದಾರೆ. ನಾನು 10 ವಾರ ಇರ್ತೀನಿ ಅಂತ ಡಿಸೈಡ್ ಮಾಡೋಕೆ ಇವರು ಯಾರು? ನಾವೆಲ್ಲಾ ಏನೂ ಅಲ್ಲ. ಯಾವುದೋ ಒಂದು ಸೀರಿಯಲ್ ಐದುವರೆ ವರ್ಷ ಮಾಡಿಕೊಂಡು ಸುಮ್ಮನೆ ಬಂದಿದ್ದೀವಿ ಇಲ್ಲಿ. ಯು ಆರ್ ನಂಥಿಂಗ್.. ತಿಳ್ಕೊಂಡ್ ಬಿಡಿ.. ಗೋಮುಖ ವ್ಯಾಘ್ರ ತರಹ ಆಟಾಡುತ್ತಿದ್ದೀರಾ ಎಂದು ಹೇಳಿದ್ದಾರೆ.
ಇವತ್ತಿಂದ ಆಟ ಶುರು. ಯಾರ್ಯಾರು ಈ ಮನೆಯಲ್ಲಿ 10 ವಾರದವರು ಅಂತ ನಾನೂ ನೋಡೇ ಬಿಡ್ತೀನಿ ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ತ್ರಿವಿಕ್ರಮ್, ಆಯ್ತಮ್ಮ.. ನೀನು ಫಿನಾಲೆಗೆ ಹೋಗಮ್ಮ. ಬಿಗ್ ಬಾಸ್ ನಂದಾ?, ಇನ್ಮೇಲೆ ನನ್ನ ಆಟ ಶುರು ಎಂದು ಹೇಳಿದ್ದಾರೆ.
ಈ ಘಟನೆ ನಡೆದ ಬಳಿಕ ಧರ್ಮಾ ಕೀರ್ತಿರಾಜ್ ಕೂಡ ಇದೀಗ ನಮ್ಮದೂ ಆಟ ಶುರು ಅಂತಲೇ ಹೇಳಿದ್ದಾರೆ. ಹಾಗೆ ಹೇಳುವಾಗ ಪಕ್ಕದಲ್ಲಿ ಅನುಷಾ ರೈ ಹಾಗೂ ಭವ್ಯ ಗೌಡ ಕೂಡ ಇದ್ದರು. ಈ ಮಾತು ಕೇಳಿ ಭವ್ಯ ಗೌಡ ಏನೂ ಹೇಳಲಿಲ್ಲ. ಆದರೆ, ಅನುಷಾ ರೈ ಈಗ ಎಲ್ಲರದೂ ಆಟ ಶುರು ಅಂತಲೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಮನೆಯಲ್ಲಿ ದೊಡ್ಡ ಗೇಮ್ ಪ್ಲಾನ್ ಶುರುವಾದಂತಿದೆ.
BBK 11: ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಮತ್ತೋರ್ವ ಸ್ಪರ್ಧಿ: ಯಾರು?