ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭದಿಂದಲೂ ಉಗ್ರಂ ಮಂಜು-ಗೌತಮಿ ಜಾಧವ್ ಜೊತೆ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಮೋಕ್ಷಿತಾ ಪೈ ಕೆಲ ವಾರಗಳ ಹಿಂದೆ ದೂರ-ದೂರ ಕೂಡ ಆಗಿದ್ದರು. ಅಣ್ಣ ತಂಗಿಯಂತೆ ಇದ್ದ ಮೋಕ್ಷಿತಾ ಮತ್ತು ಮಂಜು ಬದ್ಧ ವೈರಿಗಳಾದರು. ಬಿಗ್ ಸಾಮ್ರಾಜ್ಯದ ಟಾಸ್ಕ್‌ನಲ್ಲಿ ಅಂತು ಇದು ಮುಂದಿನ ಹಂತಕ್ಕೋಯಿತು. ಎದುರಾಳಿ ಟೀಂನಲ್ಲಿ ಗೌತಮಿ-ಮಂಜು ಇದ್ದಾರೆ ಎಂಬ ಕಾರಣಕ್ಕೆ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ ಕೂಡ ಆಡಲಿಲ್ಲ.
ಆದರೀಗ ಮೋಕ್ಷಿತಾ -ಗೌತಮಿ ಮತ್ತೆ ಫ್ರೆಂಡ್ಸ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಅತ್ತ ಮಂಜು ಬರಬರುತ್ತಾ ಒಬ್ಬಂಟಿಯಾಗುತ್ತಿದ್ದಾರೆ. ಈ ವಾರ ಈ ಮೂವರ ಮಧ್ಯೆ ಮಹತ್ವದ ಬದಲಾವಣೆ ಆಗಿವೆ. ಈ ವಾರದಲ್ಲಿ ಟಾಸ್ಕ್ಗಾಗಿ ತಂಡದ ಆಯ್ಕೆ ಸಮಯದಲ್ಲಿ ‘ಈ ಮನೆಯಲ್ಲಿ ಮಾನಸಿಕವಾಗಿ ಬಲಶಾಲಿ ಆಗಿರುವ ಸದಸ್ಯ’ ಮೋಕ್ಷಿತಾ ಎಂದು ಗೌತಮಿ ಅವರು ಫೋಟೋ ಹಿಡಿದರು.
ಫ್ರೆಂಡ್‌ಶಿಪ್ ಸರ್ಕಲ್‌ನಲ್ಲಿ ಇದ್ದು, ಅಲ್ಲಿಂದ ವಾಕೌಟ್ ಆಗಿ ಒಬ್ಬಳೇ ಆಡಿದ್ರು. ಕ್ಯಾಪ್ಟನ್ಸಿ ವಿಚಾರದಲ್ಲಿ ತಪ್ಪು – ಸರಿ ಅನ್ನೋದಕ್ಕಿಂತ ಆ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಬಹಳ ಗಟ್ಟಿಯಾಗಿದ್ದಾಗ ಮಾತ್ರ ಈ ನಿರ್ಧಾರ ಬರುತ್ತೆ ಎಂದು ಗೌತಮಿ ಅವರು ಮೋಕ್ಷಿತಾರನ್ನು ಹಾಡಿಹೊಗಳಿದರು.
ಗೌತಮಿ ಅವರು ಆಡಿದ ಮಾತುಗಳನ್ನ ಕೇಳಿ ಮೋಕ್ಷಿತಾ ಇಂಪ್ರೆಸ್ ಆಗಿದ್ದು, ಅವರ ತಂಡಕ್ಕೆ ಸೇರಿದ್ದಾರೆ. ಅಲ್ಲದೆ ಯಾವ ವ್ಯಕ್ತಿ ನನ್ನನ್ನ ನಾಮಿನೇಟ್ ಮಾಡ್ತಾರೋ.. ಅದೇ ವ್ಯಕ್ತಿ ನಾನು ಮಾನಸಿಕವಾಗಿ ಬಲಶಾಲಿ ಅಂತಾರೆ. ಅದಕ್ಕೆ ನಾನು ಅವರ ತಂಡ ಸೇರುತ್ತೇನೆ ಎಂದರು. ಗೌತಮಿ ಕೊಟ್ಟ ರೀಸನ್ ನನಗೆ ತುಂಬಾ ಇಂಪ್ಯಾಕ್ಟ್ ಆಯ್ತು. ನಾನು ಮಾನಸಿಕವಾಗಿ ಬಲಶಾಲಿ ಆಗಿದ್ದೇನೆ. ಟಾಸ್ಕ್‌ನಲ್ಲಿ ಗೌತಮಿ ಪಕ್ಷಪಾತ ಮಾಡಲಿಲ್ಲ ಎಂದಿದ್ದಾರೆ. ಈ ಮೂಲಕ ಇವರಿಬ್ಬರು ಹತ್ತಿರವಾಗುವ ಸೂಚನೆ ಸಿಕ್ಕಿದೆ.
ಏಕಾಂಗಿಯಾದ ಮಂಜು:
ಟಾಸ್ಕ್ ಮಧ್ಯೆ ಕೂಡ ಗೆಳೆತಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಗೌತಮಿ ಈಗ ಸಂಪೂರ್ಣ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಆತ್ಮೀಯ ಗೆಳೆಯ ಉಗ್ರಂ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದಲೇ ಹೊರಗಿಟ್ಟರು. ಟಾಸ್ಕ್ ಮಧ್ಯೆ ಕೂಡ ಗೌತಮಿ ಅವರು ಮಂಜು ಜೊತೆಗೆ ರೇಗಾಡಿದ್ದಾರೆ. ನಾನು ಕ್ಯಾಪ್ಟನ್ ಆದಾಗ, ನೀವು ಲೀಡ್ ಮಾಡಬೇಡಿ. ನಿಮ್ಮ ಧ್ವನಿಯಿಂದಾಗಿ, ನನ್ನ ಧ್ವನಿ ಕೆಳೆಗೆ ಹೋಗುತ್ತಿದೆ. ಮೋಕ್ಷಿತಾ ಅವರು ಏನು ಅಂದ್ರು. ಅವರು ಇಬ್ಬರೇ ಮಾತಾಡ್ತಾರೆ ಅಂತ. ನಾನು ಮಾತಾಡುವಾಗ, ನೀವೆ ಮಾತಾಡ್ತೀರಾ ಅನಿಸುತ್ತೆ. ಮೋಕ್ಷಿತಾ ಅವತ್ತು ಹೇಳಿದು ಕರೆಕ್ಟ್ ಅಂತ ಅನಿಸಿತು. ಮುಂಚಿನ ರೀತಿ ನೀವು ಇಲ್ಲ ಎಂದಿದ್ದಾರೆ.
BBK 11: ಜೈಲಿಗೆ ಹೋದ ಇಬ್ಬರು ಸ್ಪರ್ಧಿಗಳು: ಒಂದೇ ಸೆಲ್ನಲ್ಲಿ ಚೈತ್ರಾ-ತ್ರಿವಿಕ್ರಮ್