ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಐದನೇ ವಾರ ನಡೆಯುತ್ತಿದೆ. ಹಿಂದಿನ ನಾಲ್ಕೂ ವಾರಗಳಲ್ಲಿ ಮನೆ ನಗು-ಅಳುವಿಗಿಂತ ಹೆಚ್ಚು ಜಗಳಗಳನ್ನೇ ಕಂಡಿದೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆದರೆ, ಈ ವಾರ ಮನೆ ಕೊಂಚ ಎಮೋಷನಲ್ ಆಗಿದೆ. ಇದಕ್ಕೆ ಕಾರಣ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿರುವ ಒಂದು ಚಟುವಟಿಕೆ.
ಇಷ್ಟು ದಿನ ಜೋರು ಗಲಾಟೆಯಿಂದ ಕೂಗಾಡುತ್ತಿದ್ದ ಸ್ಪರ್ಧಿಗಳಿಗೆ ಇದೀಗ ಮನಸ್ಸಿನ ಭಾರವನ್ನು ಇಳಿಸಲು ಬಿಗ್ ಬಾಸ್ ಒಂದು ಅವಕಾಶ ನೀಡಿದ್ದಾರೆ. ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಕನ್ಫೆಷನ್ ರೂಮ್ ಒಳಗೆ ತೆರಳಿ ತಮ್ಮ ಜೀವನದಲ್ಲಿ ಆದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದರ ಪ್ರೊಮೋವನ್ನು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಬಿಗ್ ಬಾಸ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಕನ್ಫೆಷನ್ ರೂಂಗೆ ಕರೆದಿದ್ದಾರೆ. ಬಳಿಕ ನಿಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಬಿಗ್ಬಾಸ್ ಹೇಳಿದ್ದಾರೆ. ಈ ಸಂದರ್ಭ ಮೋಕ್ಷಿತಾ ಪೈ ತಮ್ಮ ಮದುವೆಗೆ ಸಂಬಂಧಿಸಿದ ವಿಚಾರವನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.
‘‘ನನಗೆ ಮದುವೆ ಆಗಬೇಕು ಎಂದು ಮನೆಯವರು ಹೇಳುತ್ತಲೇ ಬರುತ್ತಿದ್ದರು. ಕಳೆದ ಒಂದು ವರ್ಷದಿಂದ ಈ ವಿಚಾರಲ್ಲಿ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನು ಮದುವೆ ಆಗಿಲ್ಲ. ಇದಕ್ಕೆ ಕಾರಣ ಇದೆ. ನನ್ನ ತಮ್ಮ ವಿಶೇಷ ಚೇತನ. ಆತನಿಗೇ ನಾನೇ ಎಲ್ಲ. ನನ್ನ ಅಪ್ಪ-ಅಮ್ಮ ಕೂಡ ಇದ್ದಾರೆ. ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ನಾನು ಮದುವೆ ಆಗಿ ಹೋದರೆ ಇವರನ್ನು ನೋಡಿಕೊಳ್ಳೋದು ಯಾರು ಎಂಬ ಪ್ರಶ್ನೆ ನನಗೆ ಕಾಡುತ್ತದೆ,’’ ಎಂದು ಹೇಳಿದ್ದಾರೆ.
‘‘ನಾನು ಮದುವೆ ಆಗುವ ಹುಡುಗ ಹೇಗೆ ಇರುತ್ತಾನೊ ಗೊತ್ತಿಲ್ಲ. ಆ ಹುಡುಗ ನನ್ನನ್ನು ನನ್ನ ಕುಟುಂಬದಿಂದ ದೂರ ಮಾಡಿ ಬಿಡುತ್ತಾನೇನೋ ಎನ್ನುವ ಭಯ ಇದೆ. ಈ ಕಾರಣದಿಂದಲೇ ನನಗೆ ಮದುವೆ ಆಗೋಕೆ ಭಯ. ಈ ವಿಚಾರದಲ್ಲಿ ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೇನೆ. ದಯವಿಟ್ಟು ಕ್ಷಮಿಸಿ,’’ ಎಂದು ಮೋಕ್ಷಿತಾ ತಂದೆ-ತಾಯಿ ಬಳಿ ಹೇಳಿ ಸ್ವಾರಿ ಎಂದು ಕೇಳಿದ್ದಾರೆ.
BBK 11: ಹನುಮಂತನ ಅಸಲಿ ಆಟ ಶುರು: ನಾಮಿನೇಷನ್ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ ಕ್ಯಾಪ್ಟನ್