Sunday, 15th December 2024

ರಾಕಿಂಗ್ ಸ್ಟಾರ್ ಯಶ್’ಗೆ ಜನ್ಮದಿನದ ಶುಭ ಕೋರಿದ ಸುಮಲತಾ ಅಂಬರೀಷ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ಇಂದು. ಬಹು ನಿರೀಕ್ಷೆಯ ‘ಕೆಜಿಎಫ್ 2’ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸುಮಲತಾ ಅಂಬರೀಷ್ ಕೂಡ ಇನ್ ಸ್ಟಾಗ್ರಾಂನಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆರೋಗ್ಯ, ಆಯಸ್ಸು ಹಾಗೂ ಇನ್ನೂ ಹೆಚ್ಚೆಚ್ಚು ಯಶಸ್ಸು ಸಿಗಲೆಂದು ಆಶಿಸುತ್ತೇನೆ. ಕೆಜಿಎಫ್ 2 ಚಿತ್ರರಸಿಕರ ಮನರಂಜಿಸಲು ಸಿದ್ಧವಾಗಿದ್ದು, ಭಾರತ ಚಿತ್ರೋದ್ಯಮದಲ್ಲಿ ಮತ್ತೊಂದು ಮೈಲುಗಲ್ಲಾಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.