ಬೆಂಗಳೂರು: ಇದೇ ಆಗಸ್ಟ್15ರಂದು ತೆರೆ ಕಂಡಿದ್ದ ತೆಲುಗು ನಟ ರವಿತೇಜ(Ravi Teja) ಅಭಿನಯದ ಮಿಸ್ಟರ್ ಬಚ್ಚನ್ ಸಿನೆಮಾ(Mr Bachchan) ಇದೀಗ ಒಟಿಟಿ ಪ್ಲಾಟ್ಫಾರ್ಮ್ಗೆ(‘Mr Bachchan’ OTT Release) ಲಗ್ಗೆಯಿಟ್ಟಿದೆ. ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರಗೊಳ್ಳುತ್ತಿದೆ. ಮಾಸ್ ಮಹಾರಾಜ ರವಿತೇಜ ಮತ್ತು ನಿರ್ದೇಶಕ ಹರಿಶಂಕರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಸಿನಮಾ ಇದಾಗಿತ್ತು. ರವಿತೇಜ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಕೆರಳಿಸಿತ್ತು. ಆದರೆ ನಿರೀಕ್ಷೆಯಂತೆ ಈ ಸಿನೆಮಾ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಒಟಿಟಿ ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಸಿನಿಮಾ ಆಗಸ್ಟ್15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. 85 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಅರ್ಧ ಭಾಗದಷ್ಟು ಕಲೆಕ್ಷನ್ ಮಾಡುವಲ್ಲಿ ಸೋಲು ಕಂಡಿತ್ತು. ಇದರಿಂದ ನಿರ್ಮಾಣ ಸಂಸ್ಥೆ ನಷ್ಟ ಅನುಭವಿಸಿತ್ತು. ಈ ಹಿನ್ನೆಲೆ ತಾವು ಪಡೆದುಕೊಂಡ ಸಂಭಾವನೆಯಲ್ಲಿ 4 ಕೋಟಿ ರೂ. ನಟ ರವಿತೇಜ ಹಿಂದಿರುಗಿಸಿದ್ದರು. ಮತ್ತೊಂದೆಡೆ ನಿರ್ದೇಶಕ ಹರೀಶ್ ಕೂಡ 2 ಕೋಟಿ ರೂ.ವನ್ನು ನಿರ್ಮಾಪಕರಿಗೆ ನೀಡಿದ್ದರು.
ರಾಮ್ ಪೋತಿನೇನಿ ನಟನೆಯ `ಇಸ್ಮಾರ್ಟ್ ಶಂಕರ್’ ಮುಂದೆ ‘ಮಿಸ್ಟರ್ ಬಚ್ಚನ್’ ಚಿತ್ರ ಆ.15ರಂದು ರಿಲೀಸ್ ಆಗಿತ್ತು. ರವಿತೇಜಗೆ ನಾಯಕಿಯಾಗಿ ಭಾಗ್ಯಶ್ರೀ ನಟಿಸಿದ್ದರು. ಇದು ಬಾಲಿವುಡ್‌ನ ‘ರೈಡ್’ ಸಿನಿಮಾದ ರಿಮೇಕ್ ಆಗಿದೆ.
ಇದನ್ನೂ ಓದಿ Haryana Polls: ರಾಹುಲ್ ಗಾಂಧಿ ವಿರುದ್ಧವೂ ವಿನೇಶ್ ಲೈಂಗಿಕ ಕಿರುಕುಳ ಆರೋಪ ಮಾಡಬಹುದು; ಬ್ರಿಜ್ ಭೂಷಣ್
ನಾಳೆ ʼರಘು ತಾತʼ ಒಟಿಟಿಗೆ ಲಗ್ಗೆ
ಚೆನ್ನೈ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ʼಕೆಜಿಎಫ್ʼ ಸರಣಿ, ʼಕಾಂತಾರʼ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಮೂಡಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್ (Hombale Films)ನ ಮೊದಲ ತಮಿಳು ಚಿತ್ರ ʼರಘು ತಾತʼ (Raghu Thatha). ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ, ಬಹುಭಾಷಾ ಕಲಾವಿದೆ ಕೀರ್ತಿ ಸುರೇಶ್ (Keerthy Suresh) ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಯಾವಾಗ, ಯಾವ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವ ವಿವರ ಇಲ್ಲಿದೆ.
‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿಜಯ್ ಕಿರಗಂದೂರು (Vijay Kiragandur) ಅವರು ತಮ್ಮ ಬ್ಯಾನರ್ ಮೂಲಕ ಕನ್ನಡ ಜೊತೆಗೆ ಇತರ ಭಾಷೆಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅದರ ಭಾಗವಾಗಿ ತಮಿಳಿನಲ್ಲಿ ʼರಘು ತಾತʼ ಚಿತ್ರವನ್ನು ತಯಾರಿಸಿದ್ದಾರೆ. ಸುಮನ್ ಕುಮಾರ್ ರಚಿಸಿ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಹಾಸ್ಯ ಪ್ರಧಾನ ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ಆಗಸ್ಟ್ 15ರಂದು ಬಿಡುಗಡೆಯಾಗಿದೆ. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ.
ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ ʼರಘು ತಾತʼ ಬಿಡುಗಡೆಗೊಂಡ ಒಂದು ತಿಂಗಳೊಳಗೆ ಒಟಿಟಿಗೆ ಬರಲಿದೆ. ಸೆಪ್ಟೆಂಬರ್ 13ರಂದು ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಝೀ 5 ಫ್ಲಾಟ್‌ಫಾರ್ಮ್‌ನಲ್ಲಿ ʼರಘು ತಾತʼ ಪ್ರದರ್ಶನಗೊಳ್ಳಲಿದೆ. ಕೀರ್ತಿ ಸುರೇಶ್ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದರೂ ಕಥೆ, ಚಿತ್ರಕಥೆ ಹಲವರಿಗೆ ಇಷ್ಟವಾಗಿರಲಿಲ್ಲ.