ಟಾಲಿವುಡ್‌ನ (Tollywood)ಸ್ಟಾರ್ ನಟ ನಾಗ ಚೈತನ್ಯ(Naga chaitanya) ಹಾಗೂ ನಟಿ ಶೋಭಿತಾ ಧೂಳಿಪಾಲ (Sobhita Dhulipala) ಜೋಡಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ತಮ್ಮ ಮದುವೆ ದಿನಾಂಕವನ್ನು ಮಾತ್ರ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಈಗ ಮದುವೆಯ ಪೂರ್ವಭಾವಿ ಕಾರ್ಯಕ್ರಮ ಪ್ರಾರಂಭಗಿದ್ದು, ಸೋಭಿತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸರಣಿ ಫೋಟೊವನ್ನು ಹಂಚಿಕೊಂಡಿದ್ದಾರೆ. ಅರಶಿಣ ಶಾಸ್ತ್ರದ ಕಾರ್ಯಕ್ರಮಗಳು ಆರಂಭಗೊಂಡಿವೆ ಎಂದು ತೆಲುಗಿನಲ್ಲಿ ಶೀರ್ಷಿಕೆ ಕೊಟ್ಟಿದ್ದಾರೆ.
ಪಸುಪು ದಂಚದಂ ಎಂದರೇನು?
ಪಸುಪು ಕೊಟ್ಟಡಂ ಎಂದೂ ಕರೆಯಲ್ಪಡುವ ಪಸುಪು ದಂಚಡಂ ಸಾಂಪ್ರದಾಯಿಕ ತೆಲುಗು ಪದ್ಧತಿ. ಇದು ವಿವಾಹ ಪೂರ್ವ ಸಮಾರಂಭವಾಗಿದ್ದು, ಮದುವೆಯ ಆರಂಭವನ್ನು ಸೂಚಿಸುತ್ತದೆ. ಇದು ಉತ್ತರ ಭಾರತದ ವಿವಾಹಗಳ ಅರಿಶಿನ ಶಾಸ್ರ್ತ(ಹಲ್ದಿ) ಸಮಾರಂಭಗಳಿಗೆ ಹೋಲುತ್ತದೆ. ಈ ಶುಭ ಸಂದರ್ಭದಲ್ಲಿ, ಮನೆಗಳನ್ನು ಬಾಳೆಹಣ್ಣು ಮತ್ತು ವಿವಿಧ ಹೂವುಗಳಿಂದ ಅಲಂಕರಿಸಲಾಗುತ್ತದೆ ಹಾಗೂ ಬೆಳಿಗ್ಗೆ ಗಣೇಶ ಪೂಜೆಯನ್ನು ಮಾಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡುವ ಗೋಧೂಮ ರಾಯಿಯ ಪ್ರತಿಷ್ಠಾಪನೆಯ ನಂತರ, ವರನ ಕುಟುಂಬದವರು ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ.
ನಂತರ ವಧುವಿನ ಕುಟುಂಬದ ಸಮಾರಂಭದಲ್ಲಿ, ವರನ ತಾಯಿ ಮೊದಲು ತಾಂಬೂಲ ಮತ್ತು ತೆಂಗಿನಕಾಯಿಯನ್ನು ರುಬ್ಬುವ ಕಲ್ಲಿಗೆ ಅರ್ಪಿಸುತ್ತಾರೆ. ವಿವಾಹಿತ ಮಹಿಳೆಯರು ಸರದಿಯಲ್ಲಿ ಅರಿಶಿನದ ಕೊಂಬನ್ನು ನುಣ್ಣಗೆ ಪುಡಿಮಾಡಿ ಅದನ್ನು ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಪಸುಪು ದಂಚದಂ ನಂತರ, ಎರಡೂ ಕುಟುಂಬಗಳು ಮದುವೆಗೆ ಯೋಜಿಸಲು ಪ್ರಾರಂಭಿಸುತ್ತವೆ. ಸಿದ್ಧತೆಗಳು ಸಾಮಾನ್ಯವಾಗಿ ವಧುವಿಗೆ ಮದುವೆಯ ಸೀರೆಗಳು, ವರನಿಗೆ ಉಡುಪುಗಳು, ಹೊಸ ಬಟ್ಟೆ, ಚಿನ್ನ, ಬೆಳ್ಳಿ ಖರೀದಿ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಪೆಲ್ಲಿಕೊಡುಕು ಮತ್ತು ಪೆಲ್ಲಿಕುತುರು ಸಮಾರಂಭಗಳು ಸಾಮಾನ್ಯವಾಗಿ ಮದುವೆಯ ಒಂದು ದಿನ ಮೊದಲು ಅಥವಾ ಆ ದಿನದಂದು ನಡೆಯುತ್ತವೆ. ಬೆಳಿಗ್ಗೆ, ವಧು ಮತ್ತು ವರರಿಗೆ ಹಲ್ಡಿ ಮತ್ತು ಎಣ್ಣೆ ಹಚ್ಚಲಾಗುತ್ತದೆ.
ಇದನ್ನೂ ಸುದ್ದಿಯನ್ನೂ ಓದಿ: UI Movie: ಬಹುನಿರೀಕ್ಷಿತ ʼಯುಐʼ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಉಪೇಂದ್ರ ಸಿನಿಮಾ ಯಾವಾಗ ರಿಲೀಸ್?
ನಾಗ ಚೈತನ್ಯಗೆ ಇದು ಎರಡನೇ ಮದುವೆಯಾಗಿದ್ದು, ಮೊದಲು ಸಮಂತಾ ರುತು ಪ್ರಭು ಜೊತೆ ಪ್ರೀತಿಸಿ ವಿವಾಹವಾಗಿದ್ದರು. ನಂತರ ಈ ಜೋಡಿ ಕೆಲ ಕಾರಣಗಳಿಂದ ಬೇರ್ಪಟ್ಟಿತ್ತು. ಎರಡು ವರ್ಷಗಳ ರಹಸ್ಯ ಡೇಟಿಂಗ್ ನಂತರ ಈ ವರ್ಷದ ಆಗಸ್ಟ್‌ನಲ್ಲಿ ನಾಗ ಮತ್ತು ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡರು. ನಾಗಾರ್ಜುನ ಅಕ್ಕಿನೇನಿ ತಮ್ಮ ನಿಶ್ಚಿತಾರ್ಥದ ಚಿತ್ರಗಳನ್ನು ಎಕ್ಸ್‌ನಲ್ಲಿ ಅನಾವರಣಗೊಳಿಸುವವರೆಗೂ ತಮ್ಮ ಡೇಟಿಂಗ್ ವಿಷಯವನ್ನು ಮುಚ್ಚಿಟ್ಟಿದ್ದರು. ಇದೀಗ ಈ ಜೋಡಿ ಹಸೆಮಣೆ ಏರಲು ತಯಾರಾಗಿದ್ದು, ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ವಿವಾಹ ಕಾರ್ಯಕ್ರಮ ನಡೆಯಲಿದೆ.