Wednesday, 30th October 2024

ನಾನಿ ಜೊತೆ ಜಾನ್ವಿ ಕಪೂರ್ ರೋಮ್ಯಾನ್ಸ್…ಸಿನಿಮಾದಲ್ಲಿ…!

ಮುಂಬೈ: ನ್ಯಾಚುರಲ್ ಸ್ಟಾರ್ ನಾನಿ ಜೊತೆ ಜಾನ್ವಿ ಕಪೂರ್ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಸುದ್ದಿ ವೈರಲಾಗಿದೆ.

ದಿವಂಗತ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಹೆಸರು ಮಾಡಿದ್ದು, ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ.

ದಕ್ಷಿಣ ಭಾರತದ ಸಿನಿಮಾದಲ್ಲಿ ಸಕ್ರಿಯವಾಗಿರುವ ನಟಿ ಇದೀಗ ನಾನಿ ಅವರೊಟ್ಟಿಗೆ ಮುಂದಿನ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಶ್ರೀಕಾಂತ್ ಒಡೆಲ ನಿರ್ದೇಶನದ ನಾನಿ 33 ಎಂಬ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ಜೊತೆ ನಟಿ ಜಾನ್ವಿ ಕಪೂರ್ ನಟಿಸಲಿದ್ದಾರೆ ಎಂಬುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಿನಿಮಾ 2026ರಲ್ಲಿ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ಈ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು ದಕ್ಷಿಣ ಭಾರತದ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಮಹತ್ವದ ಹೆಜ್ಜೆ ಇಲ್ಲಿಂದ ಪ್ರಾರಂಭವಾಗಲಿದೆ.