Sunday, 26th May 2024

ನಟಿ ಆಲಿಯಾ ಭಟ್ ತಾತ ನರೇಂದ್ರನಾಥ್ ರಾಜ್ದಾನ್ ನಿಧನ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರ ತಾತ ನರೇಂದ್ರನಾಥ್ ರಾಜ್ದಾನ್ ಅವರು ಗುರುವಾರ ನಿಧನ ರಾಗಿದ್ದಾರೆ. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ನರೇಂದ್ರನಾಥ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಲಂಗ್ ಇನ್ಫೆಕ್ಷನ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ದ್ದರು. ನಂತರ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆಲಿಯಾ ಅವರ ತಾಯಿ ಸೋನಿ ರಾಜ್ದಾನ್ ಅವರ ತಂದೆ ನರೇಂದ್ರನಾಥ್ ರಾಜ್ದಾನ್ ಅವರ ಆರೋಗ್ಯ ಸಮಸ್ಯೆ ಇದ್ದ ಕಾರಣ ಆಲಿಯಾ ಅವಾರ್ಡ್ ಫಂಕ್ಷನ್​ಗೆ ಹೊರಟಿದ್ದರೂ ಏರ್ಪೋರ್ಟ್​ನಿಂದ ಮರಳಿ ಬಂದಿದ್ದರು.

ಹಿರಿಯ ನಟಿ ಸೋನಿ ರಾಜ್ದಾನ್ ಅವರು ತಂದೆಯೊಂದಿಗಿನ ಹಳೆಯ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿ ನರೇಂದ್ರನಾಥ್ ರಾಜ್ದಾನ್ ಅವರ ಅಗಲಿಕೆಯ ಸುದ್ದಿಯನ್ನು ನೀಡಿದ್ದಾರೆ.

ತಾತನಿಗೆ ಹುಷಾರಿಲ್ಲದ ಕಾರಣ ಆಲಿಯಾ ಭಟ್ ಏಪೋರ್ಟ್​ನಿಂದ ಮರಳಿ ಬಂದಿದ್ದಾರೆ. ಅಜ್ಜನ ಸ್ಥಿತಿ ಗಂಭೀರ ವಾಗಿರುವ ಕಾರಣ ನಟಿ ಅವಾರ್ಡ್ ಫಂಕ್ಷನ್​ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದರು.

ಆಲಿಯಾ ಭಟ್ ಅವರು ಕರಣ್ ಜೋಹರ್ ಅವರ ರಾಕಿ ಔರ್ ರಾನಿ ಕೀ ಪ್ರೇಮ್ ಕಹಾನಿಯಲ್ಲಿ ಕಾಣಿಸಿ ಕೊಳ್ಳಲಿದ್ದಾರೆ.

ಮೊಮ್ಮಗಳು ಆಲಿಯಾ ಭಟ್ ಅವರ ಮದುವೆ, ಹಾಗೂ ಆಕೆ ತಾಯಿಯಾಗುವುದನ್ನು ಕಣ್ಣಾರೆ ನೋಡಿರುವ ಅವರ ತಾತ ನಿಜಕ್ಕೂ ಅದೃಷ್ಟ ಮಾಡಿದ್ದರು ಎಂದು ನೆಟ್ಟಿಗರು ಹೇಳಿದ್ದಾರೆ.

error: Content is protected !!