ಬೆಂಗಳೂರು: ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸ್ಯಾಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯಕ್ಕೆ ರಿಲೀಫ್ ಇಲ್ಲ. ಜಾಮೀನು ಅರ್ಜಿ ನಡೆಸುವ ಮುನ್ನವೇ, ವಿಚಾರಣೆಯನ್ನು ಸೆಪ್ಟೆೆಂಬರ 14ಕ್ಕೆೆ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಮುಂದೂಡಿತು.
ಸದ್ಯ ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ, ಯಾವುದೇ ಪ್ರಶ್ನೆೆಗೆ ಉತ್ತರಿಸುತ್ತಿಲ್ಲ ಎಂದು ತನಿಖಾ ತಂಡ ತಿಳಿಸಿದೆ. ಸತತ ಎರಡೂ ಗಂಟೆಯ ವಿಚಾರಣೆಯಲ್ಲೂ ಯಾವುದೇ ಮಾಹಿತಿ ಸಿಕ್ಕಿಲ್ಲವೆನ್ನಲಾಗಿದೆ.
ರಾಗಿಣಿ ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ. ರಾಗಿಣಿ ಡ್ರಗ್ ಡೋಪ್ Test ವರದಿಯೂ ಬಾಕಿ ಇದೆ. ಒಂದು ವೇಳೆ ರಾಗಿಣಿಗೆ ಜಾಮೀನು ನೀಡಿದರೆ, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಸಿಸಿಬಿ, ಜಾಮೀನು ನೀಡ ದಂತೆ ಆಕ್ಷೇಪಣೆ ಸಲ್ಲಿಸಿದೆ. ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿ ಬಂಧಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಪರ ವಕೀಲರು ತುರ್ತಾಗಿ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಕೋರ್ಟ್ ಮನವಿಯನ್ನು ತಳ್ಳಿ ಹಾಕಿತು, ಅರ್ಜಿಯ ವಿಚಾರಣೆ ಯನ್ನು ಮುಂದೂಡಿ ಆದೇಶ ಹೊರಡಿಸಿತು.
ಆಗಸ್ಟ್ 4ರ ಶುಕ್ರವಾರ ಸಿಸಿಬಿ ಪೊಲೀಸರು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡು ಸಿಸಿಬಿ ಕಚೇರಿಗೆ ಕರೆ ತಂದಿದ್ದರು. ಅಂದು ಸಂಜೆ ಅವರನ್ನು ಬಂಧಿಸಿ 3 ದಿನಗಳ ಕಾಲ ವಶಕ್ಕೆ ಪಡೆದಿದ್ದರು.
ಸೆಪ್ಟೆಂಬರ್ 7ರಂದು ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು. ಕೋರ್ಟ್ 5 ದಿನಗಳ ಕಾಲ ಮತ್ತೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಅವರು ಸದ್ಯ ಪೊಲೀಸರ ವಶದಲ್ಲಿಯೇ ಇದ್ದಾರೆ.