Friday, 22nd November 2024

ಬಿಗ್‌ಬಾಸ್‌ಗೆ ಹೋಗಲ್ಲ, ನಟನೆಯೇ ನನ್ನ ಮೊದಲ ಆಯ್ಕೆ: ಅನಿರುದ್ಧ್

ನಟ ಅನಿರುದ್ಧ್‌ ಕಿರುತೆಯ ‘ಜೊತೆ ಜೊತೆಯಲಿ’  ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆ ಧಾರಾವಾಹಿಯ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಈಗಾಗಲೇ ಧಾರಾವಾಹಿ ಯಶಸ್ವಿ ಮುನ್ನೂರನೇ ಸಂಚಿಕೆ ಯನ್ನು ಪೂರ್ಣಗೊಳಿಸಿದೆ. ಈ ನಡುವೆಯೇ ಅನಿರುದ್ಧ್
‘ಬಿಗ್‌ಬಾಸ್’ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿ ಯಾದಲ್ಲಿ ಹರಿದಾಡುತ್ತಿವೆ. ಈ ಬಗ್ಗೆೆ ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಅನಿರುದ್ಧ್‌, ನಾನೊಬ್ಬ ಕಲಾವಿದ. ನಟನೆಯೇ ನನ್ನ ಮೊದಲ ಆಯ್ಕೆ.

ಅದಕ್ಕೆ ‘ಜೊತೆ ಜೊತೆಯಲಿ’ ಧಾರಾವಾಹಿ ಒಳ್ಳೆಯ ವೇದಿಕೆಯಾಗಿದೆ. ಇಲ್ಲಿ ಹೊಸ ತನ್ನು ಕಲಿಯುವ ಜತೆಗೆ, ಹೊಸ ಪ್ರಯೋಗ
ಮಾಡಲು ಸಾಧ್ಯವಾಗಿದೆ. ಕಿರುತೆರೆಯಲ್ಲಿ ನಟಿಸುತ್ತಿರುವುದು ನನಗೆ ತೃಪ್ತಿ ತಂದಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ತನ್ನು ಸೃಷ್ಟಿಸಿದೆ. ಇದಕ್ಕೆ ಪ್ರೇಕ್ಷಕರೇ ಕಾರಣ. ಯಾಕೆಂದರೆ ಧಾರಾವಾಹಿಯಲ್ಲಿರುವ ಕೌಟುಂಬಿಕ ಕಥೆ ಎಲ್ಲರಿಗೂ ಇಷ್ಟವಾಗಿದೆ.

ಎಲ್ಲರೂ ಇಡೀ ‘ಜೊತೆ ಜೊತೆಯಲಿ’ ಕುಟುಂಬವನ್ನು ಹರಸುತ್ತಿದ್ದಾರೆ. ಹಾಗಾಗಿ ನಾನು ನಟನೆಯಲ್ಲಿಯೇ ಮುಂದು ವರಿಯಲು
ಬಯಸಿದ್ದೇನೆ. ಹಾಗಾಗಿ‘ ಬಿಗ್‌ಬಾಸ್’ ಮನೆಗೆ ಹೋಗಲ್ಲ ಎಂದರು.

ವಿಜಯ್ ರಂಗರಾಜು ವಿರುದ್ಧ ಆಕ್ರೋಶ: ತೆಲುಗು ನಟ ವಿಜಯ್ ರಂಗರಾಜು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆೆ ಹಗುರವಾಗಿ ಮಾತನಾಡಿದ್ದರು. ಇದರಿಂದ ಅನಿರುದ್ಧ್ ಮಾಧಾನಗೊಂಡಿದ್ದಾರೆ.
ಅಪ್ಪಾಜಿ ಅವರು ಪ್ರತಿಯೊಬ್ಬರಿಗೂ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು. ಅದನ್ನು ಯಾರ ಬಳಿಯೂ ಹೇಳದಂತೆ ಮನವಿ ಮಾಡುತ್ತಿದ್ದರು, ಅಂತಹವರ ಬಗ್ಗೆ ನಟ ವಿಜಯ್ ರಂಗರಾಜು, ಹಗುರವಾಗಿ ಮಾತನಾಡಿರುವುದು ತುಂಬಾ ಬೇಸರ ತಂದಿದೆ.

ಅಪ್ಪಾವರ ಕಾಲರ್ ಹಿಡಿದರು ಎಂದೂ ಹೇಳಿದ್ದಾರೆ. ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪರಿಜ್ಞಾನ ಅವರಿಗಿ ದೆಯ? ಸಿಂಹದ ಕಾಲರ್ ಹಿಡಿಯೋಕೆ ಆಗುತ್ತದ? ಅದನ್ನ ಆಗಲೇ ಹೇಳಬೇಕಿತ್ತು. ಅಪ್ಪಾವರು ಶಾರೀರಿಕವಾಗಿ ನಮ್ಮನ್ನು  ಅಗಲಿ ಹನ್ನೊಂದು ವರ್ಷಗಳೇ ಕಳೆದಿವೆ. ಈಗ ಇಲ್ಲಸಲ್ಲದ, ಸತ್ಯಾಂಶಕ್ಕೆ ದೂರವಾದ ವಿಚಾರ ಹೇಳುವುದು ತರವಲ್ಲ.

ಸುಮ್ಮೆ ಮೀಸೆ ಬೆಳೆಸಕೊಂಡ್ರೆ ಧೈರ್ಯಶಾಲಿ ಅಲ್ಲ ಎಂದು ಅನಿರುದ್‌ದ್‌ ತಿರುಗೇಟು ನೀಡಿದರು. ನಟ ವಿಜಯ್ ರಂಗರಾಜು ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ತೆಲುಗು ಚಿತ್ರರಂಗವನ್ನು ಮನವಿ ಮಾಡಿದ್ದಾರೆ.