Friday, 22nd November 2024

Nunakkuzhi Movie: ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕುಳಿ’ ಧಮಾಕ; ದಾಖಲೆ ಬರೆದ ʼದೃಶ್ಯಂʼ ನಿರ್ದೇಶಕರ ಚಿತ್ರ

Nunakkuzhi Movie

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲೇ ತಮ್ಮದೇ ಆದ ಛಾಪು ಮೂಡಿಸಿದವರು ಮಲಯಾಳಂ ಚಿತ್ರ ನಿರ್ದೇಶಕ ಜಿತು ಜೋಸೆಫ್‌ (Jeethu Joseph). ಅವರು ಆ್ಯಕ್ಷನ್‌ ಕಟ್‌ ಹೇಳಿದ ಥ್ರಿಲ್ಲರ್‌ ʼದೃಶ್ಯಂʼ ಸರಣಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಯಾರಾಗಿದೆ. ಅಲ್ಲದೆ ʼದೃಶ್ಯಂʼ ಸಿನಿಮಾ ವಿದೇಶಿ ಭಾಷೆಗಳಿಗೂ ರಿಮೇಕ್‌ ಆಗಿರುವುದು ವಿಶೇಷ. ಇದೀಗ ಜಿತು ಜೋಸೆಫ್‌ ನಿರ್ದೇಶನದ ಹೊಸ ಚಿತ್ರ ‘ನುನಕುಳಿ’ (Nunakkuzhi Movie) ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ದಾಖಲೆ ಬರೆದಿದೆ.

ಒಟಿಟಿ ಫ್ಲಾಟ್‌ಫಾರ್ಮ್‌ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುವಲ್ಲಿ ಅನೇಕ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಅದರಲ್ಲೂ ಜೀ5 (Zee5) ಸದಾಭಿರುಚಿ ಚಿತ್ರಗಳನ್ನು ಮುಂದಿಡುತ್ತ ಪ್ರೇಕ್ಷಕರಿಗೆ ಮನ ಗೆದ್ದಿದೆ. ಇದೇ ಸೆಪ್ಟೆಂಬರ್‌ 13ರಿಂದ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ‘ನುನಕುಳಿ’ ಚಿತ್ರ ದಾಖಲೆ ಬರೆದಿದೆ.

100 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ‘ನುನಕುಳಿ’ ಹೊಸ ದಾಖಲೆ ಬರೆದಿದೆ. ಇತ್ತೀಚೆಗಷ್ಟೇ ಕೇರಳದಲ್ಲಿ ನಡೆದ ಕ್ರೀಡಾ ಸಮಾರಂಭವೊಂದರಲ್ಲಿ ಅಲ್ಲಿನ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ.ಶಿವನ್‌ಕುಟ್ಟಿ ಅವರ ಸಮ್ಮುಖದಲ್ಲಿ ‘ನುನಕುಳಿ’ ಚಿತ್ರದ 10,000 ಸ್ಕ್ವೇರ್ ಫೀಟ್ ಪೋಸ್ಟರ್ ಅನ್ನು ಜೀ5 ಅನಾವರಣಗೊಳಿಸಿದೆ.

ಕ್ರೈಂ ಕಾಮಿಡಿ ಥ್ರಿಲ್ಲರ್ ಚಿತ್ರ ‘ನುನಕುಳಿ’ ಮಲಯಾಳಂ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ಪ್ರಸಾರವಾಗುತ್ತದೆ. ʼನುನಕುಳಿʼಯಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕ್‌, ಬೈಜು ಸಂತೋಷ್, ನಿಖಿಲಾ ವಿಮಲ್, ಲೆನಾ, ಅಜು ವರ್ಗೀಸ್‌ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಥೆಯು ಐಟಿ ಅಧಿಕಾರಿಯೊಬ್ಬರು ಉದ್ಯಮಿಯ ಲ್ಯಾಪ್‌ಟಾಪ್ ವಶಕ್ಕೆ ಪಡೆದಾಗ, ಅದರಲ್ಲಿನ ಅಶ್ಲೀಲ ವಿಡಿಯೊಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ತೆಗೆದುಹಾಕುತ್ತಾನೆ ಎಂಬುದೇ ತಿರುಳು. ಈ ವೇಳೆ ಹಲವು ಸುಳ್ಳು ಹೇಳಬೇಕಾಗಿ ಬರುತ್ತದೆ. ಚಿತ್ರ ಹಾಸ್ಯ ಭರಿತ ಸನ್ನಿವೇಶದೊಂದಿಗೆ ಸಾಗುತ್ತದೆ. ಮುಂದೇನು ಎನ್ನುವ ಕುತೂಹಲವನ್ನೂ ಮೂಡಿಸುತ್ತದೆ. ಈ ಚಿತ್ರ ಆಗಸ್ಟ್‌ 15ರಂದಯ ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು.

ಈ ಸುದ್ದಿಯನ್ನೂ ಓದಿ: Kaviyoor Ponnamma: ʼಮಲಯಾಳಂ ಸಿನಿಮಾದ ಅಮ್ಮʼ ಖ್ಯಾತಿಯ ನಟಿ ಕವಿಯೂರ್‌ ಪೊನ್ನಮ್ಮ ಇನ್ನಿಲ್ಲ