Friday, 13th December 2024

ಅಕ್ಷಯ್​ ಕುಮಾರ್​ ನಟನೆಯ ‘ಓ ಮೈ ಗಾಡ್​​’ ಟೀಸರ್​​ ಅನಾವರಣ

ಮುಂಬೈ: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ಮುಖ್ಯಭೂಮಿಕೆಯ ‘OMG 2’ ಈ ಸಿನಿಮಾ ಕುರಿತು ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ.

2011ರ ಸೂಪರ್​ ಹಿಟ್ ಚಿತ್ರ ‘ಓ ಮೈ ಗಾಡ್​​’ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿ ಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಮಂಗಳವಾರ ಅನಾವರಣಗೊಂಡಿದೆ.

ಅಕ್ಷಯ್ ಕುಮಾರ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸಣ್ಣ ತುಣುಕನ್ನು ಹಂಚಿ ಕೊಂಡಿದ್ದರು. ಭಗವಾನ್ ಶಿವನ ಪಾತ್ರದ ತಮ್ಮ ನೋಟವನ್ನು ಅನಾವರಣಗೊಳಿಸಿ ದ್ದರು. ಟೀಸರ್ ಬಿಡುಗಡೆ ದಿನಾಂಕವನ್ನೂ ಸಹ ಈ ಸ್ಪೆಷಲ್​ ವಿಡಿಯೋದೊಂದಿಗೆ ಬಹಿರಂಗಪಡಿಸಿದ್ದರು.

ಓ ಮೈ ಗಾಡ್ 2 ಟೀಸರ್ ಜುಲೈ 11ರಂದು ಎಂಬ ಶೀರ್ಷಿಕೆಯೊಂದಿಗೆ ತಮ್ಮ ಕಿರು ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ, ನಟ ಅಕ್ಷಯ್ ಕುಮಾರ್ ಅವರು ಶಿವನ ವೇಷದಲ್ಲಿ ಕಾಣಿಸಿಕೊಂಡಿದ್ದು, ಹಿನ್ನೆಲೆ ಯಲ್ಲಿ “ಹರ್ ಹರ್ ಮಹಾ ದೇವ್” ಸಂಗೀತ ಕೇಳಿಬಂದಿತ್ತು. ಇಂದು ಓ ಮೈ ಗಾಡ್ 2 ಟೀಸರ್ ಅನಾವರಣಗೊಳಿಸಿ ಅಭಿಮಾನಿಗಳ ಕಾಯುವಿಕೆ ಯನ್ನು ದೂರ ಮಾಡಿದ್ದಾರೆ. ಅಮಿತ್ ರೈ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಅಮಿತ್ ರೈ ನಿರ್ದೇಶನದ ಓ ಮೈ ಗಾಡ್ 2 ಸಿನಿಮಾದಲ್ಲಿ ಪರೇಶ್ ರಾವಲ್, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮತ್ತು ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್ 11 ರಂದು ಈ ಚಿತ್ರ ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಮತ್ತು ಆಗಸ್ಟ್​​ ತಿಂಗಳಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಏರ್ಪಡಲಿದೆ.