Thursday, 26th September 2024

One And A Half Movie: ʼಹ್ಯಾಂಡಲ್ ವಿತ್ ಕೇರ್ʼ ಎಂದ ʼಒನ್ ಆಂಡ್‌ ಆ ಹಾಫ್ʼ ಚಿತ್ರತಂಡ; ಹೊಸ ಹಾಡು ರಿಲೀಸ್‌

One And A Half Movie

ಬೆಂಗಳೂರು: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ʼಒನ್ ಆಂಡ್‌ ಆ ಹಾಫ್ʼ ಕೂಡ ಒಂದು (One And A Half Movie). ಟೈಟಲ್ ಹಾಗೂ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ʼಹೇ ನಿಧಿʼ ಎಂಬ ಮೊದಲ ಹಾಡು ಹಿಟ್ ಲೀಸ್ಟ್ ಸೇರಿರುವ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ (Sandalwood News).

ʼರಂಗ್ಬಿರಂಗಿʼ, ʼಡೇವಿಡ್ʼ, ʼದಿ ವೆಕೆಂಟ್ ಹೌಸ್ʼ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ʼಒನ್ ಆಂಡ್ ಆ ಹಾಫ್ʼ ಚಿತ್ರದ ʼಹ್ಯಾಂಡಲ್ ವಿತ್ ಕೇರ್ʼ ಎಂಬ ಸಾಂಗ್ ರಿಲೀಸ್ ಮಾಡಲಾಗಿದೆ. ನಾಯಕ ಹಾಗೂ ನಿರ್ದೇಶಕ ಶ್ರೇಯಶ್ ಸೂರಿ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಆಯೋಜಿಸಿದ್ದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

ನಾಯಕಿ ಮಾನ್ವಿತಾ ಕಾಮತ್‌ ಮಾತನಾಡಿ, ʼʼಸಿನಿಮಾ ಇಂಡಸ್ಟ್ರೀಗೆ ಆಕಸ್ಮಿಕವಾಗಿ ಎಂಟ್ರಿ ಕೊಟ್ಟೆ. ಪ್ರತಿ ಸಿನಿಮಾದಿಂದ ಇಲ್ಲಿವರೆಗೂ ತುಂಬಾ ಪ್ರೀತಿ ಕೊಟ್ಟಿದ್ದೀರ. ಮೊದಲ 3 ಸಿನಿಮಾದಲ್ಲಿ 125 ದಿನದ ಬೋರ್ಡ್ ನಿಮ್ಮ ಕಡೆಯಿಂದ ಬಂದಿದೆ. ಅದೇ ರೀತಿ ʼಒನ್ ಅಂಡ್ ಹಾಫ್ʼ ಸಿನಿಮಾ 125 ದಿನ ಅಲ್ಲ 150 ದಿನದ ಬೋರ್ಡ್ ಬರಲಿ. ನಿಮ್ಮ ಸಹಕಾರವಿಲ್ಲದೇ ಏನೂ ಆಗಲ್ಲ. ಈ ಚಿತ್ರ ನನಗೆ ಸ್ಪೆಷಲ್. ಇವತ್ತು ಶ್ರೇಯಸ್ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿದೆ. ಅವರ ಚಿತ್ರ ನಿರ್ದೇಶನ ಮಾಡುವುದಲ್ಲದೇ, ನಟಿಸುತ್ತಿದ್ದಾರೆ. ನಿಮ್ಮ ತಂದೆ ಹೆಸರು ಸೂರಿ. ನನ್ನ ಗಾಢ್ ಫಾದರ್ ಹೆಸರು ಸೂರಿ. ಆ ಲಕ್ ಫ್ಯಾಕ್ಟರ್ ಕೂಡ ಈ ಚಿತ್ರದಲ್ಲಿ ವರ್ಕ್ ಆಗಲಿʼʼ ಎಂದರು.

ಶ್ರೇಯಶ್ ಸೂರಿ ಮಾತನಾಡಿ, ʼʼಈ ಸಿನಿಮಾ ನನ್ನಿಂದ ಅಲ್ಲ. ಇಡೀ ತಂಡದ ಕೆಲಸ. ಈ ಚಿತ್ರದ ನನ್ನದಲ್ಲ. ನಮ್ಮೆಲ್ಲರದ್ದು, ರಿಲೀಸ್ ಆದ ಮೇಲೆ ನಿಮ್ಮೆಲ್ಲರದ್ದು. ಎಲ್ಲಿ ತನಕ ಕರೆದುಕೊಂಡು ಹೋಗುತ್ತೀರಾ? ಎಷ್ಟು ಮುಂದೆ ಹೋಗುತ್ತೀರಾ? ಅಷ್ಟೇ ಚೆನ್ನಾಗಿ ಬೆಳೆಯುತ್ತಾ ಬೆಳೆಯುತ್ತಾ ಒಳ್ಳೆ ಸಿನಿಮಾ ಮಾಡುತ್ತೇವೆʼʼ ಎಂದು ಹೇಳಿದರು.

ಹ್ಯಾಂಡಲ್ ವಿತ್ ಕೇರ್ ಎಂಬ ಹಾಡಿಗೆ ಎಂ.ಸಿ.ಬಿಜ್ಜು ಹಾಗೂ ಯಶಸ್ ನಾಗ್ ಸಾಹಿತ್ಯ ಬರೆದಿದ್ದು, ನಾಯಕ ಶ್ರೇಯಸ್ ಸೂರಿ, ಅನಂತ್ ಹಾಗೂ ಎಂ,ಸಿ.ಬಿಜ್ಜು ಧ್ವನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಟ್ಯೂನ್ ಹಾಕಿರುವ ಹಾಡಿಗೆ ಶ್ರೇಯಸ್ ಭರ್ಜರಿಯಾಗಿ ಸ್ಟೆಪ್‌ ಹಾಕಿದ್ದಾರೆ.

ʼಒನ್ ಅಂಡ್ ಹಾಫ್ʼ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಆರ್.ಚರಣ್, ಬಿ.ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮಾನ್ವಿತಾ ಕಾಮತ್ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ಮತ್ತಿತರರು ನಟಿಸಿದ್ದಾರೆ. ದೇವೇಂದ್ರ ಛಾಯಾಗ್ರಹಣ, ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ʼಒನ್ ಅಂಡ್ ಹಾಫ್ʼ ಸಿನಿಮಾ ಶೀಘ್ರದಲ್ಲೇ ಥಿಯೇಟರ್ಗೆ ಹಾಜರಿ ಹಾಕಲಿದೆ.

ಈ ಸುದ್ದಿಯನ್ನೂ ಓದಿ: Stree 2 Box Office Collection: ಬಾಲಿವುಡ್‌ನಲ್ಲಿ ದಾಖಲೆ ಬರೆದ ʼಸ್ತ್ರೀ 2ʼ; 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ