Sunday, 15th December 2024

ಆಸ್ಕರ್ 2023: RRRನ ನಾಟು-ನಾಟು ಹಾಡು ನಾಮನಿರ್ದೇಶನ

ಸ್ಕರ್ 2023 ರ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. ಭಾರತೀಯ ಚಲನಚಿತ್ರ RRRನ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ.

ಇತ್ತೀಚೆಗೆ, ನಾಟು-ನಾಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

RRR ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಮತ್ತು ನಟು-ನಾಟು ಅತ್ಯುತ್ತಮ ಗೀತೆಯನ್ನು ಕ್ರಿಟಿಕ್ಸ್‌ ಚಾಯ್ಸ್‌ ಪ್ರಶಸ್ತಿಗಳಲ್ಲಿ ಗೆದ್ದುಕೊಂಡಿದೆ.

ಅವತಾರ್: ದಿ ವೇ ಆಫ್ ವಾಟರ್ ಮತ್ತು ದಿ ಟಾಪ್‌ಗನ್ ಮೇವರಿಕ್ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗಳನ್ನು ಪಡೆಯುತ್ತಿವೆ.

ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ‘ಆರ್‌ಆರ್‌ಆರ್’, ಸಂಜಯ್ ಲೀಲಾ ಬನ್ಸಾಲಿ ಅವರ ‘ಗಂಗೂಬಾಯಿ ಕಥಿಯಾವಾಡಿ’, ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’, ರಿಷಬ್ ಶೆಟ್ಟಿ ಅವರ ಹಿಟ್ ಕನ್ನಡ ಚಿತ್ರ ‘ಕಾಂತಾರ’ ಪಾಲಿಗೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಸಂಭ್ರಮ ಕೊನೆಗೊಂಡಿದೆ.

ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಫೈನಲ್‌ ನಾಮಿನೇಷನ್‌ ಆಗದೇ ಇದ್ದರೂ, ಅತ್ಯುತ್ತಮ ಗೀತೆ ವಿಭಾಗದಲ್ಲಿ ನಾಟು-ನಾಟು ಹಾಡು ಅಂತಿಮ ರೇಸ್‌ಗೆ ಆಯ್ಕೆಯಾಗಿದ್ದಕ್ಕೆ ಚಿತ್ರತಂಡ ಸಂಭ್ರಮ ಪಟ್ಟಿದೆ. ‘ನಾವು ಇತಿಹಾಸವನ್ನು ರಚಿಸಿದ್ದೇವೆ. 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು-ನಾಟು ನಾಮನಿರ್ದೇಶನಗೊಂಡಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಚಿತ್ರತಂಡ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.