Thursday, 19th September 2024

OTT Release: ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ, ವೆಬ್‌ ಸಿರೀಸ್‌? ಇಲ್ಲಿದೆ ವಿಡಿಯೊ ಸಹಿತ ವಿವರ

OTT Release

ಥಳವನ್ (Thalavan), ಮಿಸ್ಟರ್ ಬಚ್ಚನ್ (Mr Bachchan), ಸೆಕ್ಟರ್ 36 (Sector 36) ಸೇರಿದಂತೆ ಆಕ್ಷನ್, ಥ್ರಿಲ್ಲರ್, ಕ್ರೈಮ್ ಆಧರಿಸಿದ ಕಥಾ ಹಂದರವಿರುವ ಚಲನಚಿತ್ರ (Movie release) ಮತ್ತು ವೆಬ್ ಸರಣಿಗಳು (Web series release) ಸೆಪ್ಟೆಂಬರ್ 9ರಿಂದ 15ರ ನಡುವೆ ವಿವಿಧ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ (OTT Release) ಬಿಡುಗಡೆಯಾಗಲಿವೆ.

ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಾರ ಬಿಡುಗಡೆಯಾಗಲಿರುವ ಚಲನಚಿತ್ರ ಮತ್ತು ವೆಬ್ ಸರಣಿಗಳ ಮಾಹಿತಿ ಇಲ್ಲಿದೆ.

ಥಳವನ್

ಸಾಕಷ್ಟು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ʼಥಳವನ್ʼ ಚಿತ್ರದಲ್ಲಿ ಬಿಜು ಮೆನನ್ ಮತ್ತು ಆಸಿಫ್ ಅಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯು ಸ್ಥಳೀಯ ಪೊಲೀಸ್ ಠಾಣೆಯ ತನಿಖೆಯ ಸುತ್ತ ಸುತ್ತುತ್ತದೆ. ಸೆಪ್ಟೆಂಬರ್ 10ರಂದು ಸೋನಿ ಲೈವ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕಮಿಟಿ ಕುರೋಲು

ಬಾಲ್ಯದ ಸ್ನೇಹಿತರ ಗುಂಪಿನ ಸುತ್ತ ಕಥೆ ಹೆಣೆದಿರುವ ಕಮಿಟಿ ಕುರೋಲು ಸಂಬಂಧಗಳು ಬೆಳೆದಂತೆ ಹೇಗೆ ಪರೀಕ್ಷಿಸಲ್ಪಡುತ್ತವೆ ಎಂಬುದನ್ನು ತೋರಿಸಿದೆ. ಈ ಚಿತ್ರದಲ್ಲಿ ಸಂದೀಪ್ ಸರೋಜ್, ಪಿ. ಸಾಯಿ ಕುಮಾರ್, ಗೋಪರಾಜು ರಮಣ, ಶರಣ್ಯ ಸುರೇಶ್ ಮತ್ತು ಯಶವಂತ್ ಪೆಂಡ್ಯಾಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 11ರಂದು ಈ ಚಿತ್ರವೂ ಈಟಿವಿ ವಿನ್ ನಲ್ಲಿ ಬಿಡುಗಡೆಯಾಗಲಿದೆ.

ಬರ್ಲಿನ್

ವಿದೇಶಿ ಗೂಢಚಾರ ಎಂದು ಶಂಕಿಸಲಾದ ಕಿವುಡ- ಮೂಕ ವ್ಯಕ್ತಿಯ ಮೇಲೆ ಕಥೆ ಹೆಣೆದಿರುವ ಬರ್ಲಿನ್ ಚಲನಚಿತ್ರವನ್ನು ಅತುಲ್ ಸಬರ್ವಾಲ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಪರಶಕ್ತಿ ಖುರಾನಾ, ಇಶ್ವಾಕ್ ಸಿಂಗ್, ರಾಹುಲ್ ಬೋಸ್, ಅನುಪ್ರಿಯಾ ಗೋಯೆಂಕಾ ಮತ್ತು ಕಬೀರ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 13 ರಂದು ಜಿ5 ನಲ್ಲಿ ಬಿಡುಗಡೆಯಾಗಲಿದೆ.

ಎಮಿಲಿ ಇನ್ ಪ್ಯಾರಿಸ್ ಸೀಸನ್ 4 ಭಾಗ 2

ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗುವ ಕನಸು ಹೊತ್ತುಕೊಂಡು ಪ್ಯಾರಿಸ್‌ಗೆ ತೆರಳುವ ಎಮಿಲಿ ಕಥೆಯನ್ನು ಹೊತ್ತುಕೊಂಡು ಬರಲಿದೆ ಎಮಿಲಿ ಇನ್ ಪ್ಯಾರಿಸ್ ವೆಬ್ ಸರಣಿ. ಲಿಲಿ ಕಾಲಿನ್ಸ್, ಲ್ಯೂಕಾಸ್ ಬ್ರಾವೋ ಮತ್ತು ಲೂಸಿಯನ್ ಲಾವಿಸ್ಕೌಂಟ್ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ನಾಲ್ಕನೇ ಸೀಸನ್‌ನ ಎರಡನೇ ಭಾಗವು ಸೆಪ್ಟೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಮಿಸ್ಟರ್ ಬಚ್ಚನ್

ಅಜಯ್ ದೇವಗನ್ ಅವರ ರೈಡ್ ಚಿತ್ರದ ರಿಮೇಕ್ ಆಗಿರುವ ಮಿಸ್ಟರ್ ಬಚ್ಚನ್ ಚಿತ್ರದಲ್ಲಿ ರವಿತೇಜ, ಭಾಗ್ಯಶ್ರೀ ಬೋರ್ಸೆ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕೈಗಾರಿಕೋದ್ಯಮಿ ಸರ್ದಾರ್ ಇಂದರ್ ಸಿಂಗ್ ಮೇಲೆ ನಡೆಸಿದ ಆದಾಯ ತೆರಿಗೆ ದಾಳಿಯ ಮೇಲೆ ಕೇಂದ್ರೀಕರಿಸಿದೆ. ಈ ಚಿತ್ರ ಸೆಪ್ಟೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಆಫೀಸರ್ ಬ್ಲ್ಯಾಕ್ ಬೆಲ್ಟ್

ಆಫೀಸರ್ ಬ್ಲ್ಯಾಕ್ ಬೆಲ್ಟ್‌ನ ಕಥೆಯು ಪ್ರತಿಭಾವಂತ ಸಮರ ಕಲಾವಿದರ ಮೇಲೆ ಕೇಂದ್ರೀಕರಿಸಿದೆ. ಅಪರಾಧವನ್ನು ನಿಲ್ಲಿಸಲು ಪರೀಕ್ಷಾ ಅಧಿಕಾರಿಯೊಂದಿಗೆ ಸೇರಿ ತಂಡಗಳನ್ನು ರಚಿಸುವ ಕಥೆಯನ್ನು ಇದು ಒಳಗೊಂಡಿದೆ. ಚಿತ್ರದಲ್ಲಿ ಕಿಮ್ ವೂ ಬಿನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 13ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಸೆಕ್ಟರ್ 36

ಕೊಳೆಗೇರಿಯಿಂದ ಹಲವಾರು ಮಕ್ಕಳು ಕಾಣೆಯಾದಾಗ ಸರಣಿ ಕೊಲೆಗಾರನನ್ನು ಹಿಡಿಯಲು ಪ್ರಯತ್ನಿಸುವ ಇನ್ಸ್‌ಪೆಕ್ಟರ್‌ನ ಕಥೆಯೇ ಸೆಕ್ಟರ್ 36. ಆದಿತ್ಯ ನಿಂಬಾಳ್ಕರ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ದೀಪಕ್ ಡೊಬ್ರಿಯಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 13ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

Ramesh Aravind: ಜನ್ಮದಿನದ ಸಂಭ್ರಮದಲ್ಲಿ ರಮೇಶ್‌ ಅರವಿಂದ್‌; ಫೋಟೊ ಶೂಟ್‌ ಮೂಲಕ ಗಮನ ಸೆಳೆದ ನಟ

ಲೇಟ್ ನೈಟ್ ವಿಥ್ ದಿ ಡೆವಿಲ್

ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಹಾರರ್ ಚಿತ್ರವಾಗಿದೆ. ಡೈಯಿಂಗ್ ಟಾಕ್ ಶೋನ ನಿರೂಪಕ ಜ್ಯಾಕ್ ಡೆಲ್ರಾಯ್ ಹ್ಯಾಲೋವಿನ್ ರಾತ್ರಿಯಲ್ಲಿ ಶೂಟಿಂಗ್ ಮಾಡಲು ನಿರ್ಧರಿಸುತ್ತಾನೆ. ಹೆಡ್ ಡೇವಿಡ್ ಡ್ಯಾಸ್ಟ್ಮ್ ಅಲ್ಚಿಯನ್, ಲಾರಾ ಗಾರ್ಡನ್, ಇಯಾನ್ ಬ್ಲಿಸ್ ಮತ್ತು ಫೈಸಲ್ ಬಜ್ಜಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 13ರಂದು ಲಯನ್ಸ್‌ಗೇಟ್ ಪ್ಲೇನಲ್ಲಿ ಬಿಡುಗಡೆಯಾಗಲಿದೆ.