Thursday, 12th December 2024

ಬಾಲಿವುಡ್‌ ನಿರ್ಮಾಪಕ ಯಶ್‌ ಚೋಪ್ರಾ ಪತ್ನಿ ನಿಧನ

ಮುಂಬಯಿ: ಬಾಲಿವುಡ್‌ ನ ನಿರ್ಮಾಪಕ ಯಶ್‌ ಚೋಪ್ರಾ (74) ಪತ್ನಿ ಪಮೇಲಾ ಚೋಪ್ರಾ ಗುರುವಾರ ನಿಧನರಾಗಿದ್ದಾರೆ.

ಹಿನ್ನೆಲೆ ಗಾಯಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಅವರು ಕಳೆದ 15 ದಿನಗಳಿಂದ ಅನಾರೋಗ್ಯ ದಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟೆರ್‌ ನಲ್ಲಿದ್ದ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಪಮೇಲಾ ಚೋಪ್ರಾ ಅವರು ಯಶ್‌ ರಾಜ್‌ ಫಿಲ್ಮ್ಸ್‌ ನ ಡಾಕ್ಯುಮೆಂಟರಿ ʼದಿ ರೊಮ್ಯಾಂಟಿಕ್ಸ್ʼ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ತನ್ನ ಪತಿ ಯಶ್‌ ರಾಜ್‌ ಅವರ ಸಿನಿಮಾ ಜರ್ನಿ ಬಗ್ಗೆ ಮಾತಾನಡಿದ್ದರು.‌

1970 ರಲ್ಲಿ ಯಶ್‌ ಚೋಪ್ರಾರನ್ನು ವಿವಾಹವಾದ ಅವರಿಗೆ ಆದಿತ್ಯ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಿತ್ಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ. ಆದಿತ್ಯ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಉದಯ್ ಒಬ್ಬ ನಟ ಮತ್ತು ಚಲನಚಿತ್ರ ನಿರ್ಮಾಪಕ ರಾಗಿದ್ದಾರೆ.

ಹಿನ್ನೆಲೆ ಗಾಯಕಿಯೂ ಆಗಿದ್ದ ಅವರು, ಹಲವಾರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ತನ್ನ ಗಂಡನ ಸಿನಿಮಾವಾದ ʼಕಭಿ ಕಭಿʼ (1976), ʼಮುಜ್ಸೆ ದೋಸ್ತಿ ಕರೋಗೆʼ (2002) ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಇದಲ್ಲದೆ ಅವರು 1993 ರಲ್ಲಿ ಬಂದ ʼಐನಾʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಯಶ್‌ ಚೋಪ್ರಾ 2012 ರಲ್ಲಿ ನಿಧನರಾಗಿದ್ದಾರೆ.