Sunday, 8th September 2024

ಪರಿಣಿತಿ ಚೋಪ್ರಾ-ಆಪ್ ಎಂಪಿ ರಾಘವ್ ಚಡ್ಡಾ ನಿಶ್ಚಿತಾರ್ಥ ಇಂದು

ಮುಂಬೈ: ಬಾಲಿವುಡ್‌ ನ ಮತ್ತೊಬ್ಬ ನಟಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಪರಿಣಿತಿ ಚೋಪ್ರಾ ಹಾಗೂ ಆಪ್ ಎಂಪಿ ರಾಘವ್ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈ ಜೋಡಿ ಮೇ 13ರಂದು ಅದ್ಧೂರಿಯಾಗಿ ನಿಶ್ವಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಕಪುರ್‌ತಲಾ ಹೌಸ್ ಇಬ್ಬರ ಎಂಗೇಜ್‌ಮೆಂಟ್‌ಗೆ ಸಜ್ಜಾಗಿದೆ. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ನಿಶ್ಚಿತಾರ್ಥದ ಕಾರ್ಯಕ್ರಮಗಳು ಸಂಜೆ 5 ಗಂಟೆಯಿಂದ ಆರಂಭ ಆಗಲಿದೆ. ಸಿಕ್ ಸಂಪ್ರದಾಯದಂತೆ ಎಂಗೇಜ್‌ಮೆಂಟ್ ನಡೆಯಲಿದೆ.

ಆಪ್ ಎಂಪಿ ರಾಘವ ಚಡ್ಡ ಹಾಗೂ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ಬಾಲಿವುಡ್ ಥೀಮ್‌ ನಲ್ಲಿ ಜರುಗಲಿದೆ. ಸುಮಾರು 150 ಮಂದಿ ಭಾಗವಹಿಸುವ ಸಾಧ್ಯತೆಯಿದೆ. ಕುಟುಂಬಸ್ಥರು ಹಾಗೂ ಆತ್ಮೀಯ ಗೆಳೆಯರು ನಿಶ್ಚಿತಾರ್ಥದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಜ್ ಮುಖ್ಯಮಂತ್ರಿ ಭಗವಂತ್ ಮನ್ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಲಿದ್ದಾರೆ.

ಹಾಲಿವುಡ್‌ ಸಿನಿಮಾ ಹಾಗೂ ವೆಬ್‌ ಸೀರಿಸ್‌ನಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದ್ದಾರೆ. ಈಗಾಗಲೇ ದೆಹಲಿಗೆ ಪತಿ ನಿಕ್ ಜೋನಾಸ್ ಜೊತೆ ಬಂದಿಳಿದಿದ್ದಾರೆ. ಅಕ್ಟೋಬರ್‌ ತಿಂಗಳಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸಮಾರಂಭಕ್ಕೆ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸು ಸಾಧ್ಯತೆಯಿದೆ.

error: Content is protected !!