Sunday, 15th December 2024

ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಹಜ್ಜೆ ಹಾಕಿದ ಐಶ್ವರ್ಯಾ ರೈ ಬಚ್ಚನ್‌

ವದೆಹಲಿ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಅವರು ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಹಜ್ಜೆಹಾಕಿ ದರು.

ಲೋರಿಯಲ್‌ ಉತ್ಪನ್ನದ ರಾಯಭಾರಿಯಾಗಿರುವ ಅವರು ಕಂಪನಿಯ ಕಾಸ್ಮೇಟಿಕ್‌ಗಳನ್ನು ಪ್ರತಿನಿಧಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದಾರೆ. ಬಂಗಾರದ ಬಣ್ಣದ ಗೌನ್‌ ಧರಿಸಿ, ಕರ್ಲಿ ಹೇರ್‌ ಸ್ಟೈಲ್‌ನಲ್ಲಿ ಸ್ಟೈಲಿಶ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿ ಅಭಿಮಾನಿಗಳನ್ನು ಸೆಳೆದಿದ್ದಾರೆ.

ನೆಟ್ಟಿಗರು ಐಶ್ವರ್ಯ ಸೌಂದರ್ಯ ಕಂಡು ‘ರಾಣಿ ಯಾವಾಗಲೂ ರಾಣಿಯಾಗಿಯೇ ಇರುತ್ತಾರೆ, ಅವರ ಹತ್ತಿರ ಯಾರೂ ಹೋಗಲು ಸಾಧ್ಯವಿಲ್ಲ’ ಎಂದು ಕಾಮೆಂಟ್‌ ಮಾಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್‌ ಅವರು ಪ್ರತಿ ವರ್ಷ ಪ್ಯಾರಿಸ್‌ ಫ್ಯಾಷನ್‌ ವೀಕ್‌ ಮತ್ತು ಕ್ಯಾನಸ್‌ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ.

ಮೊದಲ ಬಾರಿಗೆ ಪ್ಯಾರಿಸ್‌ ಫ್ಯಾಷನ್‌ ವೀಕ್‌ ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ರ‍್ಯಾಂಪ್‌ ವಾಕ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿ ನವ್ಯಾ ಹೆಜ್ಜೆ ಹಾಕಿದ್ದಾರೆ.