ಹೈದರಾಬಾದ್: ನಟಿ ಊರ್ವಶಿ ರೌಟೇಲಾ ಅವರು ಸಿನಿಮಾ ರಿಲೀಸ್ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.
ಒಟ್ಟಿನಲ್ಲಿ ಹೆಸರು ಚಾಲ್ತಿಯಲ್ಲಿರಬೇಕು ಎಂದು ಅವರು ಬಯಸುತ್ತಾರೆ. ಈಗ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶದ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
‘ಬ್ರೋ’ ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ವರುಣ್ ತೇಜ್ ಹಾಗೂ ಪವನ್ ಕಲ್ಯಾಣ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ದಲ್ಲಿ ಊರ್ವಶಿ ರೌಟೇಲಾ ಕೂಡ ಅಭಿನಯಿಸಿ ದ್ದಾರೆ. ಅವರು ಸಿನಿಮಾ ರಿಲೀಸ್ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿ ದ್ದಾರೆ. ಈ ಪೋಸ್ಟ್ನಲ್ಲಿ ಅವರು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.
‘ಬ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ವೇಳೆ ಊರ್ವಶಿ ಅವರು ವರುಣ್ ತೇಜ್ ಹಾಗೂ ಪವನ್ ಕಲ್ಯಾಣ್ ಜೊತೆ ಪೋಸ್ ಕೊಟ್ಟಿದ್ದಾರೆ. ‘ಗೌರವಾನ್ವಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ಬ್ರೋ ಅವತಾರದಲ್ಲಿ. ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ’ ಎಂದು ಕೋರಿದ್ದಾರೆ.
‘ಅಕ್ಕಾ ಅವರು ಸಿಎಂ ಅಲ್ಲ. ಅವರ ಎಂಎಲ್ಎ ಆಗೋಕೂ ಸಾಧ್ಯವಾಗಿಲ್ಲ. ನಿಮಗೆ ಒಳ್ಳೆಯ ಡಾಕ್ಟರ್ ಅವಶ್ಯಕತೆ ಇದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.