Monday, 16th September 2024

ಫ್ಯಾಂಟಮ್ ಅಲ್ಲ, ‘ವಿಕ್ರಾಂತ್ ರೋಣ’: ಬುರ್ಜ್ ಖಲೀಫಾ ಮೇಲೆ ಲೋಗೋ ಬಿಡುಗಡೆ

ಬೆಂಗಳೂರು: ಕನ್ನಡದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನಲ್ಲಿ ‘ಫ್ಯಾಂಟಮ್’ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಿದೆ.

ನಿರ್ದೇಶಕ ಅನೂಪ್ ಭಂಡಾರಿ, ‘ಫ್ಯಾಂಟಮ್’ ಸಿನಿಮಾ ಹೊಸ ಶೀರ್ಷಿಕೆಯೊಂದಿಗೆ ತೆರೆ ಮೇಲೆ ಬರಲಿದ್ದು, ಮುಂಬರುವ ಜನವರಿ 31 ರಂದು ಪ್ರಪಂಚದ ಎತ್ತರದ ಕಟ್ಟಡ ಬುರ್ಜ್ ಖಲೀಫಾ ದ ಮೇಲೆ ಚಿತ್ರದ ಹೊಸ ಶೀರ್ಷಿಕೆಯ ಲೋಗೋ ವನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

ಸಿನಿಮಾದ ಶೀರ್ಷಿಕೆ ಬದಲಾಗುವ ಕುರಿತಾಗಿ ಈ ಹಿಂದೆಯೇ ಹಲವಾರು ಗಾಳಿ ಸುದ್ದಿಗಳು ಹರಿದಾಡಿದ್ದು, ಇದಕ್ಕೆ ಪೂರಕವಾಗು ವಂತೆ ನಿರ್ದೇಶಕ ಅನೂಪ್ ಕೂಡಾ ಟ್ಟೀಟ್ ಸಂದೇಶ ಕಳುಹಿಸುವ ಮೂಲಕ ಜನವರಿ 21 ರಂದು ಚಿತ್ರಕ್ಕೆ ಸಂಬಂಧಿಸಿದಂತೆ ಬಿಗ್ ಅಪ್ ಡೇಟ್ ನೀಡಲಿದ್ದೇವೆ ಎಂದಿದ್ದರು.

ನಟ ಸುದೀಪ್ ಕೂಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ್ದು, ಚಿತ್ರದ ಪ್ರಮುಖ ಪ್ರಾತ್ರವಾಗಿರುವ ವಿಕ್ರಾಂತ್ ರೋಣ ಎಂಬ ಹೆಸರನ್ನೆ ಚಿತ್ರದ ಶೀರ್ಷಿಕೆಯನ್ನಾಗಿಸುವ ಕುರಿತು ಸುಳಿವು ನೀಡಿದ್ದರು.

Leave a Reply

Your email address will not be published. Required fields are marked *