Saturday, 14th December 2024

ಬಹುಭಾಷಾ ನಟ ಪ್ರಕಾಶ್ ರಾಜ್’ಗೆ ಸೋಲು

ಹೈದರಾಬಾದ್‌ : ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಶನ್ಗೆ ನಡೆದ ಚುನಾವಣೆ ಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ. ಪ್ರತಿಸ್ಪರ್ಧಿ ನಟ ಮಂಚು ವಿಷ್ಣು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು, ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ವಿಷ್ಣು ಅವರು ಪ್ರತಿಸ್ಪರ್ಧಿ ಪ್ರಕಾಶ್ ರಾಜ್ ಅವರನ್ನು 106 ಮತಗಳಿಂದ ಸೋಲಿಸಿದರು. ವಿಷ್ಣು 380 ಮತಗಳನ್ನು ಪಡೆದರೆ, ಪ್ರಕಾಶ್ ರಾಜ್ ಅವರು 274 ಮತಗಳನ್ನು ಪಡೆದುಕೊಂಡಿದ್ದಾರೆ.

ಮಂಚು ವಿಷ್ಣು ತನ್ನ ಚುನಾವಣೆಯ ಪ್ರಚಾರದಲ್ಲಿ ನಟ ಪ್ರಕಾಶ್ ರಾಜ್‌ ಅವರನ್ನು ಹೊರಗಿನಿಂದ ಬಂದವರು ಎಂದು ಪ್ರತಿಬಿಂಬಿಸಿದ್ದರು. ಈ ಅಂಶವು ವಿಷ್ಣುವಿನ ಬಲವನ್ನು ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿಸಿತು. ವಿಷ್ಣು ಮಂಚು ಸಮಿತಿಯ ಹಲವಾರು ಸದಸ್ಯರು ಸಂಘದ ಇತರ ಉನ್ನತ ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.