Thursday, 12th December 2024

ನಟ ಪ್ರಕಾಶ್ ರಾಜ್ ಅವರಿಗೆ ಸಮನ್ಸ್

ವದೆಹಲಿ : ಪ್ರಣವ್ ಜ್ಯುವೆಲ್ಲರ್ಸ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ.

ಇಡಿ ನಿನ್ನೆಯಷ್ಟೇ ತಮಿಳುನಾಡಿನ ತಿರುಚ್ಚಿಯಲ್ಲಿರುವ ಪ್ರಣವ್ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿದೆ.

ನಟ ಪ್ರಕಾಶ್ ರಾಜ್ ಅವರು ಪ್ರಣವ್ ಜ್ಯುವೆಲರ್ಸ್ ಜಾಹೀರಾತು ನೀಡುತ್ತಿದ್ದರು. ಈಗ ಪ್ರಕರಣದಲ್ಲಿ ಪ್ರಕಾಶ್ ರಾಜ್ ಅವರನ್ನೂ ವಿಚಾರಣೆಗೆ ಒಳಪಡಿಸಬಹುದು. ಸಧ್ಯ ನಟನಿಗೆ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇಡಿ ಮೂಲಗಳ ಪ್ರಕಾರ, ತಮಿಳುನಾಡಿನ ತಿರುಚ್ಚಿಯ ಪ್ರಸಿದ್ಧ ಪ್ರಣವ್ ಜ್ಯುವೆಲ್ಲರ್ಸ್‌ನಲ್ಲಿ ಪಿಎಂಎಲ್‌ಎ ಅಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ, ಅಂತಹ ಹಲವು ದಾಖಲೆಗಳು ಪತ್ತೆಯಾಗಿದ್ದು, ಸುಮಾರು 23 ಲಕ್ಷ 70 ಸಾವಿರ ಮೌಲ್ಯದ ಅನುಮಾನಾಸ್ಪದ ವಹಿವಾಟಿನ ಬಗ್ಗೆ ಮಾಹಿತಿ ನೀಡಲಾಗಿದೆ.

ಶೋಧದ ವೇಳೆ 11 ಕೆಜಿ 60 ಗ್ರಾಂ ಚಿನ್ನಾಭರಣವನ್ನೂ ಇಡಿ ವಶಪಡಿಸಿಕೊಂಡಿದೆ.