Thursday, 12th December 2024

ನಟ, ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್ ಇನ್ನಿಲ್ಲ

ಚೆನ್ನೈ: ನಟ, ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್(70 ವರ್ಷ)  ಅವರು ಶುಕ್ರವಾರ ಚೆನ್ನೈನ ಕಿಲ್ಪಾಕ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸಾವಿಗೂ ಕೆಲವೇ ಗಂಟೆಗಳ ಮೊದಲು ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.

ಪೋಥನ್ ಅವರು 44 ವರ್ಷಗಳ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 100 ಚಿತ್ರ ಗಳಲ್ಲಿ ನಟಿಸಿದ್ದಾರೆ ಮತ್ತು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ ಕೆಲವು ಪ್ರಮುಖ ಪಾತ್ರಗಳು ’22 ಫೀಮೇಲ್ ಕೊಟ್ಟಾಯಂ’, ‘ಉಯರೆ’, ‘ಬೆಂಗಳೂರು ಡೇಸ್’, ‘ವರುಮೈಯಿನ್ ನಿರಂ ಸಿವಪ್ಪು’, ‘ಪನ್ನರ್ ಪುಷ್ಪಂಗಳು’ ಸೇರಿದಂತೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿವೆ.