Monday, 14th October 2024

ಪಂಜಾಬಿ ಗಾಯಕ ಅಮಾನ್‌ಜೋತ್ ಸಿಂಗ್ ಮೇಲೆ ಹಲ್ಲೆ

ಮೊಹಾಲಿ: ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಗಾಯಕ ಹನಿ ಸಿಂಗ್ ತಮಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿ ದ್ದಾರೆ.

ಶನಿವಾರ ಅಲ್ಫಾಜ್ ಮೇಲೆ ಹಲ್ಲೆ ನಡೆದಿದೆ. ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಫಾಜ್ ಮೊಹಾಲಿ ಧಾಬಾದ ಹೊರಗೆ ಬನೂರ್ ಲಾಂದ್ರನ್ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದಿದ್ದು ಅವರು ಗಾಯಗೊಂಡಿದ್ದಾರೆ. ಆರೋಪಿಯನ್ನು ಹರಿಯಾಣದ ಪಂಚಕುಲದ ರಾಯ್‌ಪುರ ರಾಣಿ ನಿವಾಸಿ ವಿಕ್ಕಿ ಎಂದು ಗುರುತಿಸಲಾಗಿದ್ದು, ಮೊಹಾಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.