Sunday, 15th December 2024

ಡಿಂಪಲ್ ಕ್ವೀನ್ ರಚಿತಾ ರಾಮ್’ಗೆ 31ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳುರು: ನಟಿ ರಚಿತರಾಮ್ ಇಂದು ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ರಚಿತಾ ರಾಮ್ 2013ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬುಲ್ ಬುಲ್’ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದರು.

ನಂತರ 2014ರಲ್ಲಿ ಮತ್ತೊಮ್ಮೆ ನಟ ದರ್ಶನ್ ಜೊತೆ ‘ಅಂಬರೀಶ’ ಸಿನಿಮಾದಲ್ಲಿ ಅಭಿನಯಿಸಿದರು. ನಟಿ ರಚಿತಾ ರಾಮ್ ಇತ್ತೀಚಿಗೆ ನಾಯಕಿಯಾಗಿ ಮಾತ್ರವಲ್ಲದೆ ಅತಿಥಿ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತರಾಮ್ ಅಭಿನಯದ ಐದು ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ.

‘ಶಬರಿ ಸರ್ಚಿಂಗ್ ಫಾರ್ ರಾವಣ’ ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದ್ದು, ‘ಬ್ಯಾಡ್ ಮ್ಯಾನರ್ಸ್’ ‘ಮ್ಯಾಟ್ನಿ’ ‘ಲವ್ ಮೀ ಆರ್ ಹೇಟ್ ಮಿ’ ಹಾಗೂ’ಸಂಜು ವೆಡ್ಸ್ ಗೀತಾ2′ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.