Thursday, 25th July 2024

ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ನಟಿ ರಚಿತಾ ರಾಮ್ ಭೇಟಿ

ಳ್ಳಾಲ: ಸ್ಯಾಂಡಲ್‌ವುಡ್‌ನ ಡಿಂಪಲ್ ಬೆಡಗಿ, ನಟಿ ರಚಿತಾ ರಾಮ್ ಅವರು ಬುಧ ವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.

‘ಸ್ನೇಹಿತರನೇಕರು ಕೊರಗಜ್ಜ ದೈವದ ಕಾರಣೀಕದ ಬಗ್ಗೆ ತಿಳಿಸಿದ್ದರು. ಹಾಗಾಗಿ ಇಲ್ಲಿಗೆ ಬರಬೇಕು ಅನ್ನಿಸಿತು. ಕೊರಗಜ್ಜನ‌ ಕ್ಷೇತ್ರವು ಪ್ರಾಕೃತಿಕ ಸೌಂದರ್ಯದಿಂದ‌ ಕೂಡಿದ್ದು, ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ತೆರೆ ಕಾಣಲಿರುವ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ’ ಎಂದು ರಚಿತಾರಾಮ್ ಹೇಳಿದರು.

ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ರಚಿತಾ ರಾಮ್ ಅವರನ್ನ ಶಾಲು ಹೊದಿಸಿ ಅಭಿನಂದಿಸಲಾಯಿತು.

ಮಂಗಳೂರಿನ ಎ.ಜೆ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಶಾಂತ್ ಶೆಟ್ಟಿ ಮಾರ್ಲ,ಆಶ್ರಿತಾ ಶೆಟ್ಟಿ, ಹೊಟೇಲ್ ಫುಡ್ ಲ್ಯಾಂಡ್ಸ್ ಮಾಲೀಕ ಆಶೀಶ್ ಶೆಟ್ಟಿ, ಮಾಗಣ್ತಡಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಯರಾಮ್ ಭಂಡಾರಿ, ಟ್ರಸ್ಟಿಗಳಾದ ಮಹಾಬಲ್ ಹೆಗ್ಡೆ, ಪ್ರೀತಮ್ ಶೆಟ್ಟಿ, ಮಾಗಣ್ತಡಿ ಕುಟುಂಬದ ಜಗನ್ನಾಥ್ ಶೆಟ್ಟಿ, ಸ್ವಾತಿ ಶೆಟ್ಟಿ ಮೊದಲಾದವರು ಜೊತೆಯಲ್ಲಿ ದ್ದರು.

error: Content is protected !!