Wednesday, 18th December 2024

Radhika Apte: ಹೊಸ ಲುಕ್‌ನಲ್ಲಿ ಮಿಂಚಿದ ರಾಧಿಕಾ ಅಪ್ಟೆ; ಗರ್ಭಿಣಿಯರಿಗಾಗಿ ವಿಭಿನ್ನ ಸ್ಟೈಲ್ ಪರಿಚಯಿಸಿದ ಬೋಲ್ಡ್ ನಟಿ

ಮುಂಬೈ: ಸಾಮಾನ್ಯವಾಗಿ ಕೆಲ ನಟಿಯರು ಮದುವೆ, ಮಗು ಆದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಇಂಡಸ್ಟ್ರಿ ಬಿಟ್ಟು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗುತ್ತಾರೆ. ಆದರೆ ಬಾಲಿವುಡ್ ಬೆಡಗಿಯರು ಮದುವೆ, ಮಕ್ಕಳು ಆದರೂ ಚಿತ್ರರಂಗದಿಂದ ಹೆಚ್ಚು ಬಿಡುವು ಪಡೆಯಲ್ಲ. ಕೆಲವೇ ತಿಂಗಳಲ್ಲಿ ವಾಪಸ್ ಆಗುತ್ತಾರೆ. ಸಿನಿಮಾ ಕಲಾವಿದರು ಮದುವೆ ಆಗಿದ್ದರೂ ಮಕ್ಕಳ ವಿಚಾರದಲ್ಲಿ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ. ಮೊದಲು ಕರಿಯರ್ ಬಳಿಕ ಮಕ್ಕಳು ಎಂದು ತೀರ್ಮಾನಿಸುತ್ತಾರೆ. ಬಿಟೌನ್ (Bollywood actress) ಬ್ಯೂಟಿ 39ನೇ ವರ್ಷದ ರಾಧಿಕಾ ಅಪ್ಟೆ (Radhika Apte) ಇದಕ್ಕೆ ಹೊರತಾಗಿಲ್ಲ.

ಹೌದು, ಮದುವೆಯಾಗಿ ಬರೊಬ್ಬರಿ 12 ವರ್ಷಗಳು ಕಳೆದ ಬಳಿಕ ರಾಧಿಕಾ ಅಪ್ಟೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 2012ರಲ್ಲಿ ಬ್ರಿಟಿಷ್ ಮ್ಯೂಸಿಕ್ ಡೈರೆಕ್ಟರ್ ಬೆನೆಡಿಕ್ಟ್ ಟೈಲರ್ ಅವರನ್ನು ವಿವಾಹವಾಗಿದ್ದ ರಾಧಿಕಾ ಅಪ್ಟೆ ತನ್ನ ಮದುವೆಯ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ.

ಆದರೆ ಈಗ ಇದ್ದಕ್ಕಿದ್ದಂತೆ ತನ್ನ ಬೇಬಿ ಬಂಪ್ (Baby Bump) ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವುದರ ಮೂಲಕ, ಎಲ್ಲರನ್ನೂ ಅಚ್ಚರಿಯ ಕೂಪಕ್ಕೆ ತಳ್ಳಿದ್ದರು. ಅದು ಏನೇ ಇರಲಿ ನಟಿಯ ಮನೆಗೆ ಇದೀಗ ಚೊಚ್ಚಲ ಮಗುವಿನ ಆಗಮನವಾಗಿದ್ದು, ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ನಟಿ ತಮ್ಮ ಬೇಬಿ ಬಂಪ್‌ ಫೋಟೊ (hot baby bump photo shoot) ಹಂಚಿಕೊಳ್ಳುವ ಮೂಲಕ ತಮ್ಮ ಗರ್ಭಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆ ಹಾಗೂ ಮಗುವಿನ ನಂತರ ಆಗುತ್ತಿರುವ ಅನುಭವದ ಬಗ್ಗೆ ಫ್ಯಾನ್ಸ್‌ಗೆ ತಿಳಿಸಿದ್ದಾರೆ.

ಬೇಬಿ ಬಂಪ್​​ ಫೋಟೊಗಳಲ್ಲಿ ಸಖತ್​ ಬೋಲ್ಡ್​​ ಆಗಿ ಕಾಣಿಸಿಕೊಂಡಿರುವ ರಾಧಿಕಾ ಅಪ್ಟೆ ಮೂರು ಔಟ್ ಫಿಟ್‌ನಲ್ಲಿ ಕ್ಯಾಮೆರಾಕ್ಕೆ ಪೋಸ್ ನೀಡಿದ್ದಾರೆ. ಅವರು ನೆಟ್ಟೆಡ್ ಡ್ರೆಸ್ ಧರಿಸಿಕೊಂಡು ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ. ಇನ್ನೊಂದರಲ್ಲಿ ಟ್ರಾನ್ಸಫರೆಂಟ್, ಡೀಪ್ ನೆಕ್ ಡ್ರೆಸ್ ಹಾಕಿದ್ದು, ಕೊನೆಯಲ್ಲಿ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ತರಬೇತಿ ವೇಳೆ ಸ್ಫೋಟ; ರಾಜಸ್ಥಾನದ ಬಿಕಾನೇರ್‌ನಲ್ಲಿ ಇಬ್ಬರು ಯೋಧರು ಬಲಿ

ನೆಟ್ಟಿಗರು ಮಾತ್ರ ನಟಿಯ ಈ ಅವತಾರ ನೋಡಿ ಫುಲ್ ಗರಂ ಆಗಿದ್ದು, ಅವರು ಧರಿಸಿದ್ದ ಡ್ರೆಸ್ ಕುರಿತು ಸಾಕಷ್ಟು ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ. ಅಲ್ಲದೇ ಗರ್ಭಧಾರಣೆಯಲ್ಲಿಯೂ ಹುಚ್ಚು ಹುಚ್ಚಾಗಿ ಫೋಟೊ ಶೂಟ್ ಮಾಡುವ ಶೋಕಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬಾಲಿವುಡ್ ಸೆಲೆಬ್ರಿಟಿಗಳು ಅರೆ ಬರೆ ಬಟ್ಟೆಯಲ್ಲಿ ಫೋಟೊಕ್ಕೆ ಪೋಸ್ ನೀಡುತ್ತಿದ್ದಾರೆ. ಇದರ ಅಗತ್ಯ ಹಾಗೂ ಅವಶ್ಯಕತೆ ಇಲ್ಲ. ಗರ್ಭಧಾರಣೆ ಹಾಗೂ ತಾಯ್ತನ ಎರಡೂ ಅತ್ಯಂತ ಮಧುರವಾದ ಘಟ್ಟ. ಅದನ್ನು ಅರೆ ಬರೆ ಬಟ್ಟೆ ಧರಿಸಿ, ದೇಹದ ಭಾಗಗಳನ್ನು ತೋರಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಸಭ್ಯತೆಯಿಂದಲೂ ಫೋಟೊ ಶೂಟ್ ಮಾಡಿಸಬಹುದು ಎಂಬ ಅಭಿಪ್ರಾಯವನ್ನು ನೆಟ್ಟಿಗರು ಹೊರ ಹಾಕಿದ್ದಾರೆ.

ಇನ್ನು ರಾಧಿಕಾ, ತಾವು ಗರ್ಭಿಣಿಯಾಗಿದ್ದಾಗ ತಮ್ಮ ದೇಹದಲ್ಲಾದ ಬದಲಾವಣೆ ಹಾಗೂ ನಂತರ ಆದ ಬದಲಾವಣೆ ಬಗ್ಗೆ ಫ್ಯಾನ್ಸ್ ಬಳಿ ಹಂಚಿಕೊಂಡಿದ್ದು, ಈ ಸಮಯದಲ್ಲಿ ನನ್ನ ದೇಹವನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟವಾಗಿತ್ತು. ಹಿಂದೆಂದೂ ನಾನು ಇಷ್ಟು ದಪ್ಪ ಆಗಿರಲಿಲ್ಲ. ನನ್ನ ದೇಹ ಊದಿಕೊಂಡಿತ್ತು. ನನ್ನ ದೇಹವನ್ನು ಒಪ್ಪಿಕೊಳ್ಳಲು ನಾನು ತುಂಬಾ ಕಷ್ಟಪಡಬೇಕಾಯಿತು. ನನ್ನ ಸೊಂಟದಲ್ಲಿ ವಿಪರೀತ ನೋವಿತ್ತು. ನಿದ್ರೆ ಸಮಸ್ಯೆ ನನ್ನನ್ನು ಕಾಡುತ್ತಿತ್ತು. ಈಗ ತಾಯಿಯಾಗಿ ಎರಡು ವಾರವೂ ಕಳೆದಿಲ್ಲ, ನನ್ನ ದೇಹ ಮತ್ತೆ ವಿಭಿನ್ನವಾಗಿ ಕಾಣಲಾರಂಭಿಸಿದೆ ಎಂದು ಬರೆದುಕೊಂಡಿದ್ದಾರೆ.